ಮಂಗಳೂರು : ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಇಡ್ಯಾ ಪೂರ್ವ 6ನೇ ವಾರ್ಡಿನಲ್ಲಿ 5 ಕೋಟಿ 88 ಲಕ್ಷ 65 ಸಾವಿರ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಅವರು ಗುದ್ದಲಿ ಪೂಜೆ ಮತ್ತು ಲೋಕಾರ್ಪಣೆಯನ್ನು ನೆರವೇರಿಸಿ ಮಾತನಾಡಿದರು.
ಇಡ್ಯಾ ಪೂರ್ವ ವಾರ್ಡಿನ ಜನತಾ ಕಾಲನಿ ನಿವಾಸಿಗಳ ದಶಕದ ಬೇಡಿಕೆಯಾದ ಜನತಾ ಕಾಲನಿಯ ಮುಖ್ಯರಸ್ತೆ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಶಾಸಕರು ಉದ್ಘಾಟಿಸಿದರು.
ಈ ಸಂದರ್ಭ ಸ್ಥಳೀಯ ಮ. ನ. ಪಾ ಸದಸ್ಯೆ ಶ್ರೀಮತಿ ಸರಿತಾ ಶಶಿಧರ್, ಮ. ನ. ಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ಜನತಾ ಕಾಲನಿ ಶ್ರೀ ಗಣೇಶ ಭಜನಾ ಮಂದಿರ ಅಧ್ಯಕ್ಷರಾದ ಸುಧಾಮ ಶೆಟ್ಟಿ ಬಾಳ, ಬಿಜೆಪಿ ಶಕ್ತಿಕೇಂದ್ರ ಪ್ರಮುಖರಾದ ಸಂತೋಷ್ ಕುಮಾರ್, ಶಶಿಧರ್ ಕಟ್ಲ, ಮಂಡಲ ಕೋಶಾಧಿಕಾರಿ ಪುಷ್ಪರಾಜ್ ಮುಕ್ಕ, ಕಾರ್ಯದರ್ಶಿ ರಾಘವೇಂದ್ರ ಶೆಣೈ, ಮಹಾ ಶಕ್ತಿಕೇಂದ್ರ ಕಾರ್ಯದರ್ಶಿ ದಿನಕರ್ ಇಡ್ಯಾ, ಯುವಮೋರ್ಚಾ ಮಹಾ ಶಕ್ತಿಕೇಂದ್ರ ಅಧ್ಯಕ್ಷ ಹರಿ ಪ್ರಸಾದ್, ಮಾಜಿ ಮ. ನ. ಪಾ ಸದಸ್ಯ ಗುಣ ಶೇಖರ್ ಶೆಟ್ಟಿ, ಸ್ಥಳೀಯರಾದ ಬೋಜ ಹೆಗ್ಡೆ, ರವಿ ಶೆಟ್ಟಿ, ಹಿರಿಯ ಕಾರ್ಯಕರ್ತರಾದ ಅಚ್ಯುತ ಶೆಟ್ಟಿಗಾರ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
10/05/2022 05:35 pm