ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಡ್ಡೂರು ಫಾರ್ಮ್ಸ್ ನಲ್ಲಿ ನಡೆದ ಕಮಲೋತ್ಸವದಲ್ಲಿ ಸಾಗರೋಪಾದಿಯಲ್ಲಿ ಕಾರ್ಯಕರ್ತರ ದಂಡು

ಬಂಟ್ವಾಳ: ಕೇಸರಿ ಶಾಲು ಹಾಕಿದ ಭರ್ತಿ 15 ಸಾವಿರದಷ್ಟು ಕಾರ್ಯಕರ್ತರು. ವಿಶಾಲವಾದ ಸಭಾಂಗಣದಲ್ಲಿ ಹಾಡು, ನೃತ್ಯ, ಎದುರು ಮೈದಾನದಲ್ಲಿ ಆಟ. ಪಕ್ಕದಲ್ಲೇ ಸ್ವಾದಭರಿತ ತಿನಿಸುಗಳು, ಐಸ್ ಕ್ರೀಂ, ಚುರುಮುರಿಯಂಥ ಖಾದ್ಯಗಳು. ಮಧ್ಯಾಹ್ನ ಭರ್ಜರಿ ಭೋಜನ. ಮಹಿಳೆಯರು, ಮಕ್ಕಳಿಗೆ ವಿಶೇಷ ಆಟೋಟ.

ವಿಧಾನಸಭೆಯ ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಒಡ್ಡೂರು ಫಾರ್ಮ್ಸ್ ನಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಆಯೋಜಿಸಿದ ಕಮಲೋತ್ಸವದಲ್ಲಿ ಕ್ಷೇತ್ರದ 59 ಗ್ರಾಮಗಳಿಂದ ಆಗಮಿಸಿದ ಕಾರ್ಯಕರ್ತರು ಉತ್ಸಾಹದಲ್ಲಿ ಪಾಲ್ಗೊಂಡರು. ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡುವ ತಳಮಟ್ಟದ ಕಾರ್ಯಕರ್ತ ತನ್ನ ಕುಟುಂಬದೊಂದಿಗೆ ಇತರ ಕಾರ್ಯಕರ್ತರ ಕುಟುಂಬದೊಂದಿಗೆ ಬೆರೆತು, ಒಂದಿಡೀ ದಿನ ಕಾಲ ಕಳೆದು ಆಟೋಟದಲ್ಲಿ ಭಾಗವಹಿಸುವಂತೆ ಮಾಡುವ ಮೂಲಕ ಕಾರ್ಯಕರ್ತರ ಉತ್ಸಾಹವನ್ನು ವೃದ್ಧಿಗೊಳಿಸುವ ಆಶಯ ಇದರಲ್ಲಿ ಇದ್ದರೆ,ನಾಯಕ, ಕಾರ್ಯಕರ್ತರ ಸಮ್ಮಿಲನವೂ ಆಯಿತು.

ಒಟ್ಟಾರೆಯಾಗಿ ಇಡೀ ದಿನದ ಕಮಲೋತ್ಸವ ಬಿಜೆಪಿ ಪಕ್ಷ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ಕಾರ್ಯಕರ್ತನ ಕುಟುಂಬದ ಪ್ರತಿಯೊಬ್ಬ ಸದಸ್ಯನನ್ನೂ ಜತೆಗೂಡಿಸಿಕೊಂಡಿದೆ.

ಮಹಿಳೆಯರಿಗೆ ಉಚಿತ ಬಳೆ, ಮಕ್ಕಳಿಗೆ ಆಟದ ಮಜಾ: ಆಗಮಿಸಿದ್ದ ಮಹಿಳೆಯರಿಗೆ ಉಚಿತವಾಗಿ ಬಳೆ, ಮೆಹಂದಿ ನೀಡಲಾಯಿತು. ಹೀಗಾಗಿ ಇದಕ್ಕಾಗಿ ಇಡಲಾಗಿದ್ದ ಕೌಂಟರ್ ಭರ್ತಿಯಾಗಿತ್ತು. ಮಹಿಳೆಯರು ಉತ್ಸಾಹದಿಂದಲೇ ತಮಗೆ ಬೇಕಾದ ಬಣ್ಣಗಳ ಆಯ್ಕೆಯೊಂದಿಗೆ ಬಳೆಗಳನ್ನು ಖರೀದಿಸಿದರು.

ಒಂದೆಡೆ ಮಹಿಳೆಯರು ತಮಗೆ ಬೇಕಾದ ವಸ್ತುಗಳ ಕಡೆ ಚಿತ್ತ ಹರಿಸಿದ್ದರೆ, ಇನ್ನೊಂದೆಡೆ, ಮಕ್ಕಳು ಆಟೋಟಗಳಲ್ಲಿ ಬ್ಯುಸಿ. ಗಾಳಿಪಟ ಹಾರಿಸುತ್ತಾ, ತೊಟ್ಟಿಲಲ್ಲಿ ಕುಣಿಯುತ್ತಾ ಮಕ್ಕಳು ನಲಿದಾಡಿದರು.

Edited By : PublicNext Desk
Kshetra Samachara

Kshetra Samachara

28/04/2022 06:17 pm

Cinque Terre

1.73 K

Cinque Terre

0

ಸಂಬಂಧಿತ ಸುದ್ದಿ