ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೇ 1ರಂದು ಸುರತ್ಕಲ್ ಬಂಟರ ಭವನದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಸುರತ್ಕಲ್: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಸಂಸ್ಥೆ ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ವಿಜಯ್ ಪಾಲಿಕ್ಲಿನಿಕ್ ಆ್ಯಂಡ್ ಡಯಾಗ್ನೋಸ್ಟಿಕ್ ಸೆಂಟರ್ ಮತ್ತು ವಿಜಯ್ ಮೆಡಿಕಲ್ಸ್ ಸುರತ್ಕಲ್ ಇವರ ಸಹಯೋಗದಲ್ಲಿ ಮೇ 1 ರಂದು ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಸುರತ್ಕಲ್ ಬಂಟರ ಭವನದಲ್ಲಿ ಖ್ಯಾತ 17 ಮಂದಿ ವೈದ್ಯರುಗಳ ನೇತೃತ್ವದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ.

ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ ವೈ ಭರತ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ ವಿಜಯ್ ಎಂ ಬುದ್ನಾರ್, ಡಾ ರಾಹುಲ್ ರಾವ್ ಭಾಗವಹಿಸಲಿದ್ದಾರೆ. ವಿಜಯ ಮೆಡಿಕಲ್ಸ್ ನ ಮಾಲಕರಾದ ದಯಾನಂದ ಡಿ ಶೆಟ್ಟಿ, ವೈದ್ಯಕೀಯ ಸಮಿತಿಯ ಸಂಚಾಲಕ ಪ್ರತಾಪ್ ಶೆಟ್ಟಿ ಉಪಸ್ಥಿತರಿರುವರು.

ರಕ್ತದೊತ್ತಡ, ಮಧುಮೇಹ, ಸ್ತ್ರೀರೋಗ, ಚರ್ಮರೋಗ, ಎಲುಬು, ಜಠರ, ಪಿತ್ತಕೋಶ, ಅರ್ಬುದ (ಕ್ಯಾನ್ಸರ್) ಎಂಡೋಸ್ಕೋಪಿ, ಮೈಕ್ರೋಸ್ಕೋಪಿ, ನರಸಂಬಂಧಿ, ಮನೋರೋಗ, ಮೂತ್ರಕೋಶದ ಕಾಯಿಲೆ, ಹಾಗೂ ಮಕ್ಕಳ ಕಾಯಿಲೆಗಳ ತಪಾಸಣೆಯನ್ನು ಶಿಬಿರದಲ್ಲಿ ಮಾಡಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆಯುವಂತೆ ಸಂಘದ ಪ್ರಧಾನ‌ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

24/04/2022 01:43 pm

Cinque Terre

922

Cinque Terre

0

ಸಂಬಂಧಿತ ಸುದ್ದಿ