ಚಿತ್ರಾಪುರ:4 ಕೋಟಿ ರೂ ಅನುದಾನದಲ್ಲಿ ಪಾಲಿಕೆ ವ್ಯಾಪ್ತಿಯ ಬೈಕಂಪಾಡಿ ವಾರ್ಡ್ 10 ರ ಚಿತ್ರಾಪುರ ರಾಷ್ಟ್ರೀಯ ಹೆದ್ದಾರಿ 66 ರ ಬಳಿಯಿಂದ ಚಿತ್ರಾಪುರ ದೇವಸ್ಥಾನದ ತನಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆಯನ್ನು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಅವರು ನೆರವೇರಿಸಿದರು.
ಶಾಸಕರಾದ ಡಾ.ಭರತ್ ಶೆಟ್ಟಿಯವರ ವಿಶೇಷ ಮುತುವರ್ಜಿಯಿಂದ ಪಾಲಿಕೆ ಹಾಗೂ ಗ್ರಾಮಾಂತರ ಭಾಗದ ಬಹುತೇಕ ರಸ್ತೆಗಳು ಅಭಿವೃದ್ಧಿಗೊಳ್ಳುತ್ತಿವೆ.
ಈ ಸಂದರ್ಭ ಕಾರ್ಪೋರೇಟರ್ ಗಳಾದ ಕುಮಾರಿ ಸುಮಿತ್ರ,ವೇದಾವತಿ,ಸರಿತಾ ಶಶಿಧರ್, ರಾಜೇಶ್ ಸಾಲ್ಯಾನ್ ಬೈಕಂಪಾಡಿ, ಬಿಜೆಪಿ ಮುಖಂಡರಾದ ಗಣೇಶ್ ಹೊಸಬೆಟ್ಟು, ವಿಠ್ಠಲ್ ಸಾಲ್ಯಾನ್, ಗಿರೀಶ್ ಕರ್ಕೇರ,ಸುನೀತ್ ಚಿತ್ರಾಪುರ,ರಾಜೇಶ್ ಕರ್ಕೇರ,ಗಿರೀಶ್ ಕರ್ಕೇರ,ಬಾಲಕೃಷ್ಣ ಕುಡುಂಬೂರು, ಪುಷ್ಪರಾಜ್ ಕುಡುಂಬುರು, ಪುನೀತ್ ಬೈಕಂಪಾಡಿ, ಗುರುಪ್ರಸಾದ್ ಹಳೆಯಂಗಡಿ. ರಾಜೀವ್ ಕಾಂಚನ್, ಹೋಟೇಲ್ ದ್ವಾರದ ಕೃಷ್ಣ ಶೆಟ್ಟಿ , ಉಮೇಶ್ ಕರ್ಕೇರ,ಭರತ್ ಕುಮಾರ್ ಕೂಳೂರ್, ಮಾಧವ ಸುವರ್ಣ,ಪ್ರಕಾಶ್ ಕೋಡಿಕಲ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
15/04/2022 04:56 pm