ಬಂಟ್ವಾಳ: ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಅವರಿಂದ ನೇತ್ರಾವತಿ ನದಿಗೆ ಬಾಗಿನ ಸಮರ್ಪಣೆ ಕಾರ್ಯ ಮಂಗಳವಾರ ಬಂಟ್ವಾಳ ತಾಲೂಕಿನ ತುಂಬೆಯ ಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಅವರು, ಎರಡು ತಿಂಗಳು ಕುಡಿಯುವ ನೀರಿನ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನೀರು ವಿತರಣೆ ಕುರಿತು ನಿಗಾ ಇಡಲಾಗುತ್ತದೆ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಚಟುವಟಿಕೆಗಳು ಕಡಿಮೆ ಇದ್ದ ಕಾರಣ, ಎರಡು ವರ್ಷ ನೀರಿನ ಅಭಾವ ಇರಲಿಲ್ಲ. ಆದರೆ ಈ ಬಾರಿ ಏಪ್ರಿಲ್, ಮೇ ತಿಂಗಳಲ್ಲಿ ಬೇಡಿಕೆ ಹೆಚ್ಚಾಗಬಹುದು ಎಂದ ಅವರು, ನೀರಿನ ಅಧ್ಯತೆಯ ಮೇಲೆ ಮಿತವಾಗಿ ನೀರಿನ ಬಳಕೆ ಮಾಡಿ ,ಕುಡಿಯುವ ನೀರಿನ ಹೊರತು ಇತರ ಖರ್ಚಿಗಾಗಿ ಬೇರೆ ಮೂಲಗಳನ್ನು ಅವಲಂಬಿಸಿ ಎಂದು ಅವರು ಮನವಿ ಮಾಡಿದರು.
ಅಮೃತ್ ಯೋಜನೆ ಒಂದು ಹಂತದ ಡ್ಯಾಂ ಕಾಮಗಾರಿ ಮೂರು ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ, ಬಳಿಕ 10 ಎಂ.ಎಲ್.ಡಿ ಹೆಚ್ಚುವರಿ ನೀರು ನಗರ ಭಾಗಕ್ಕೆ ಸಿಗುತ್ತದೆ. ಎಲ್ಲಾ ಕಾಮಗಾರಿಗಳು ಪೂರ್ತಿಯಾದರೆ ಶುದ್ದ ಕುಡಿಯುವ ನೀರು ಪೂರೈಕೆಯಾಗುತ್ತದೆ. ತುಂಬೆ ಅಣೆಕಟ್ಟಿನಿಂದ ವರ್ಷಪೂರ್ತಿ ಕುಡಿಯುವ ನೀರು ಸರಬರಾಜು ಆಗುತ್ತದೆ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಪಮೇಯರ್ ಸುಮಂಗಳ ರಾವ್, ಕಾರ್ಪೋರೆಟ್ ಗಳಾದ ದಿವಾಕರ ಪಾಂಡೇಶ್ವರ ಶಶಿಧರ ಹೆಗ್ಡೆ, ಭಾಸ್ಕರ ಕೆ, ಲೀಲಾವತಿ ಪ್ರಕಾಶ್, ಗಣೇಶ್ ಕುಲಾಲ್, ಮನೋಹರ್ ಕದ್ರಿ, ಕಿರಣ್ ಕೋಡಿಕಲ್, ಸುದೀರ್ ಶೆಟ್ಟಿ ಕಣ್ಣೂರು, ಶೋಭಾರಾಜೇಶ್, ಲೋಕೇಶ್, ಮನೋಜ್,ಕಿಶೋರ್ ಕೊಟ್ಟಾರಿ, ರಂಜಿನಿ ಕೋಟ್ಯಾನ್, ಶಕೀಲಾ ಕಾವ, ರೂಪ ಶ್ರೀ , ಜಯಶ್ರೀ ಕುಡ್ವ, ಸಂದೀಪ್ ಗರೋಡಿ,ವೀಣಾ ಮಂಗಳ , ಜಗದೀಶ್ ಶೆಟ್ಟಿ ಬೊಳಾರ, ತುಂಬೆ ಗ್ರಾ.ಪಂ. ಅಧ್ಯಕ್ಷ ಪ್ರವೀಣ್, ಮಂಗಳೂರು ಮ.ನಪಾ.ಆಯುಕ್ತ ಅಕ್ಷಯ ಶ್ರೀದರ್,ಮ.ನಪಾ ಎ.ಡಬ್ಲೂ ಚೇತನ್, ಎ.ಇ.ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
22/03/2022 04:05 pm