ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರಳ ಗ್ರಾಮದಲ್ಲಿ 13 ಕೋಟಿ ರೂ ವೆಚ್ಚದ ಕಾಮಗಾರಿ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಅರಳ ಗ್ರಾ.ಪಂ.ವ್ಯಾಪ್ತಿಯಲ್ಲಿ ಈಗಾಗಲೇ 13 ಕೋಟಿಗಿಂತಲೂ ಅಧಿಕ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅಧಿಕ ಕಾಮಗಾರಿ ಗಳನ್ನು ಮಾಡುವುದಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಭರವಸೆ ನೀಡಿದರು.

ಅವರು 2.20 ಕೋಟಿ ವೆಚ್ಚದಲ್ಲಿ ಅರಳ ಗ್ರಾ.ಪಂ‌.ವ್ಯಾಪ್ತಿಯ ಕುಟ್ಟಿಕಳದಿಂದ ಕಲ್ಲೇರಿ ಸಂಪರ್ಕ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಮುಂದಿನ ನಾಲ್ಕು ತಿಂಗಳೊಳಗೆ ಕಾಮಗಾರಿ ಮುಗಿಸಿ ಜನರ ಉಪಯೋಗ ಕ್ಕೆ ಲಭಿಸುವುದು ಎಂಬ ಭರವಸೆ ನೀಡಿದರು.

ಅದ್ಯಕ್ಷ ಲಕ್ಮೀದರ ಶೆಟ್ಟಿ, ಉಪಾಧ್ಯಕ್ಷೆ ಪ್ರೇಮ,ಸದಸ್ಯರಾದ ನಳಿನಿ, ಪ್ರಸನ್ನಕುಮಾರ್ ಶೆಟ್ಟಿ,ದೇವಕಿ, ದೇಜಪ್ಪ ಪೂಜಾರಿ ಚಂದ್ರಹಾಸ ಪೂಜಾರಿ , ಒಳಚರಂಡಿ ಮಂಡಳಿ ಸುಲೋಚನ ಜಿ.ಕೆ.ಭಟ್, ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿ ಡೊಂಬಯ್ಯ ಅರಳ, ಪ್ರಮುಖರಾದ ರಂಜನ್ ಕುಮಾರ್ ಶೆಟ್ಟಿ, ರವಿ ಅರಸ, ಚಂದ್ರಶೇಖರ್ ಶೆಟ್ಟಿ, ಸುಕುಮಾರ್, ಉಮೇಶ್ ಡಿ.ಎಮ್ ಅರಳ, ಸುದರ್ಶನ ಬಜ, ಪುರುಷೋತ್ತಮ ಶೆಟ್ಟಿ ವಾಮದಪದವು, ರಮನಾಥ ರಾಯಿ, ಕಾರ್ತಿಕ್ ಬಲ್ಲಾಳ್, ಪಿ.ಡಿ.ಒ ಧರ್ಮರಾಜ್ ಗುತ್ತಿಗೆ ದಾರ ನಜೀರ್ ಕೋಣಾಜೆ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

19/03/2022 12:06 pm

Cinque Terre

1.13 K

Cinque Terre

0

ಸಂಬಂಧಿತ ಸುದ್ದಿ