ಬಜಪೆ:ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಯ ಅಂಚಿಗೆ ಕಸ ಎಸೆಯುತ್ತಿದ್ದ ಮಹಿಳೆಯೊಬ್ಬರಿಗೆ ಪಡುಪೆರಾರ ಗ್ರಾಮ ಪಂಚಾಯತ್ ಪಿಡಿಓ ರವರು 2000 ರೂ ದಂಡ ವಿಧಿಸಿದ ಘಟನೆ ನಡೆದಿದೆ.
ಪಂಚಾಯತ್ ವ್ಯಾಪ್ತಿಯ ಕತ್ತಲ್ ಸಾರ್ ಹಾಗೂ ಪಡೀಲು ಪ್ರದೇಶಗಳ ಲ್ಲಿ ಸುಂಕದಕಟ್ಟೆಯ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಪಂಚಾಯತ್ ಸದಸ್ಯರುಗಳು ,ಸಿಬ್ಬಂದಿ ವರ್ಗ ಸೇರಿ ಕಸವನ್ನು ಹೆಕ್ಕಿ ಸಂಗ್ರಹಿಸುತ್ತಿದ್ದ ವೇಳೆ ಪ್ಲಾಸ್ಟಿಕ್ ಬಕೆಟ್ ನೊಂದಿಗೆ ಸ್ಥಳಕ್ಕೆ ಆಗಮಿಸಿದ ಮಹಿಳೆಯೊಬ್ಬರು ತ್ಯಾಜ್ಯವನ್ನು ರಸ್ತೆಯ ಅಂಚಿನಲ್ಲಿ ಸುರಿದಿದ್ದು,ಈ ವೇಳೆ ಸ್ಥಳದಲ್ಲಿದ್ದ ಪಡುಪೆರಾರ ಗ್ರಾಮ ಪಂಚಾಯತ್ ನ ಪಿಡಿಓ ಉಗ್ಗಪ್ಪ ಮೂಲ್ಯ ಅವರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಮಹಿಳೆಗೆ ಸ್ಥಳದಲ್ಲೆ 2000 ರೂ ದಂಡ ವಿಧಿಸಿದ್ದಾರೆ.
Kshetra Samachara
18/03/2022 05:17 pm