ಬಜಪೆ:ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವಂತಹ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿ ಕರ್ನಾಟಕ ಬಂದ್ ಗೆ ಬಜಪೆ ಪೇಟೆಯಲ್ಲಿ ಎಲ್ಲಾ ಮುಸ್ಲಿಂ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿ ಬಂದ್ ಗೆ ಬೆಂಬಲ ನೀಡಿದರು.
ಬಜಪೆ ಮಾರುಕಟ್ಟೆಯಲ್ಲಿನ ಎಲ್ಲಾ ಮುಸ್ಲಿಂ ವ್ಯಾಪಾರಸ್ಥರ ಅಂಗಡಿಗಳು ಬಂದ್ ಆಗಿದ್ದವು.ಹೆಚ್ಚಿನ ಅಂಗಡಿಗಳು ಬಂದ್ ಆಗಿದ್ದರಿಂದ ಇಲ್ಲಿನ ಮಾರಕಟ್ಟೆ ಬಿಕೋ ಅನ್ನುತ್ತಿತ್ತು.ಒಟ್ಟಾರೆಯಾಗಿ ಬಜಪೆಯಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Kshetra Samachara
17/03/2022 09:01 pm