ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೈಕಂಬ: ದುರ್ನಾತ ಬೀರುತ್ತಿದೆ ಚರಂಡಿ - ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿ ಆರೋಗ್ಯ ಕೇಂದ್ರಕ್ಕೆ ದೂರು

 ಬಜಪೆ :ಮೂಡಬಿದಿರೆ - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುರುಪುರ  ಕೈಕಂಬ  ಪೇಟೆಯ ರಾಷ್ಟ್ರೀಯ ಹೆದ್ದಾರಿಯ  ಎರಡೂ ಅಂಚುಗಳಲ್ಲಿ ಇರುವಂತಹ ಚರಂಡಿಗಳಲ್ಲಿ ಕೊಳಚೆ ನೀರು ಹರಿದು ಹೋಗದೆ ನಿಂತು ದುರ್ನಾತ ಬೀರುತ್ತಿದೆ.

ಹೆದ್ದಾರಿಯ ಸುತ್ತಮುತ್ತಲು ಇರುವಂತಹ ವಸತಿ ಸಮುಚ್ಚಯ,  ವಾಣಿಜ್ಯ ವ್ಯಾಪಾರ ವಹಿವಾಟು ನಡೆಸುವ ಹೋಟೆಲ್,ಸಂಚಾರಿ  ಮಾರಾಟಗಾರರು, ಬೀದಿ ಬದಿ  ವ್ಯಾಪಾರಸ್ತರು ತ್ಯಾಜ್ಯವನ್ನು ವರ್ಗೀಕರಿಸದೇ ನೀರು ಸಹಿತ  ಚರಂಡಿಗೆ ಬಿಡುವ ಬಗ್ಗೆ ಸಾರ್ವಜನಿಕ ದೂರು ನೀಡಿದ್ದು,  ಚರಂಡಿಗಳಲ್ಲಿ ನೀರು ನಿಂತು ಸೊಳ್ಳೆ, ಹುಳುಗಳು ಬೆಳೆದು ಸಾಂಕ್ರಾಮಿಕ ರೋಗ ಉಂಟಾಗುವ ಸಾಧ್ಯತೆಗಳಿವೆ.

ಪರಿಸರವೂ ಕೂಡ ಮಾಲಿನ್ಯ ಉಂಟಾಗುವ ಸಾಧ್ಯತೆ ಇದೆ.ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ  ಸಾರ್ವಜನಿಕರು  ಆರೋಗ್ಯ ಹಿತದೃಷ್ಟಿಯಿಂದ  ನಿಂತ ಕೊಳಚೆ  ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಿ, ಸಂಬಂಧಪಟ್ಟ ವಾಣಿಜ್ಯ, ವ್ಯವಹಾರ ಸಂಸ್ಥೆಗಳಿಗೆ  ಘನ, ದ್ರವ ತ್ಯಾಜ್ಯ ವಿಲೇವಾರಿಗೆ ಸೂಕ್ತ  ಮಾರ್ಗಸೂಚಿಗಳನ್ನು ನಿಗದಿಪಡಿಸಬೇಕು ಈ ಮೂಲಕ ದಿನ0ಪ್ರತಿ ಸಾವಿರಾರು ಜನ ಸಂಚರಿಸುವ ಪೇಟೆಯ ತೆರೆದ ಚರಂಡಿಗಳನ್ನು ಸ್ವಚ್ಛವಾಗಿಡಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಬಜಪೆ ಆರೋಗ್ಯ ಕೇಂದ್ರಕ್ಕೆ ದೂರು ನೀಡಿದ್ದಾರೆ.    

Edited By : PublicNext Desk
Kshetra Samachara

Kshetra Samachara

17/03/2022 07:17 pm

Cinque Terre

866

Cinque Terre

0

ಸಂಬಂಧಿತ ಸುದ್ದಿ