ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಪ್ಪೆಪದವು: ಇಂಧನ ಉಳಿತಾಯ ಮತ್ತು ಸಂರಕ್ಷಣೆ ಜನಜಾಗೃತಿ ಕಾರ್ಯಕ್ರಮ

ಬಜಪೆ:ಕುಪ್ಪೆಪದವು ಸಮೀಪದ ಮಂಗಳೂರು ಮರೈನ್ ಕಾಲೇಜು ಅಂಡ್ ಟೆಕ್ನಾಲಜಿ ಇದರ ನೇತೃತ್ವದಲ್ಲಿ  ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ - ಕರ್ನಾಟಕ  ಸರ್ಕಾರ  (KREDL ) ಇವರ ಸಹಯೋಗದಲ್ಲಿ  ಇಂಧನ ಉಳಿತಾಯ ಮತ್ತು ಸಂರಕ್ಷಣೆ ಜನಜಾಗೃತಿ ಕಾರ್ಯಕ್ರಮವು ಕುಪ್ಪೆಪದವಿನಲ್ಲಿ ಆಯೋಜಿನೆ ಗೊಂಡಿತು.

ಇಂಧನ ಉಳಿತಾಯ ಮತ್ತು ಸಂರಕ್ಷಣೆ ಕುರಿತಂತೆ ಜನರಲ್ಲಿ ಜಾಗ್ರತಿ ಮೂಡಿಸುವ ಉದ್ದೇಶದಿಂದ  ಕಾಲೇಜು ವಿದ್ಯಾರ್ಥಿಗಳಿಂದ  ಕುಪ್ಪೆಪದವು ವ್ಯಾಪ್ತಿಯಲ್ಲಿ ಜಾಥಾ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಮಹೇಂದ್ರ ಧೋ0ಗಡಿಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಇಂಧನ ಉಳಿತಾಯದ ಮಹತ್ವ ಹಾಗೂ ಸಂರಕ್ಷಣೆಯ ಅಗತ್ಯದ ಕುರಿತು ಮಾತನಾಡಿದರು.ಇಂಧನ ಉಳಿತಾಯ ಮತ್ತು ಸಂರಕ್ಷಣೆ ಕುರಿತಂತೆ ಚರ್ಚೆ, ರಸಪ್ರಶ್ನೆ ಆಯೋಜಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.  ವಿಭಾಗ ಮುಖ್ಯಸ್ಥರುಗಳಾದ ಪ್ರೊ. ಪ್ರತಾಪ್ ರೈ ಮತ್ತು ಪ್ರೊ. ರಮೇಶ್ ಅನ್ವೇಕರ್ ಪ್ರಾಸ್ತಾವಿಕವಾಗಿ  ಭಾಷಣ ಮಾಡಿದರು. ಪ್ರೊ.ಸುನಿಲ್ ನಾಯಕ್ ವಂದಿಸಿದರು. ಕಾಲೇಜಿನ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

08/03/2022 08:03 pm

Cinque Terre

1.25 K

Cinque Terre

0

ಸಂಬಂಧಿತ ಸುದ್ದಿ