ಮಂಗಳೂರು:ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಶನಿವಾರ ಮಂಗಳೂರು ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿ ಅನಿರೀಕ್ಷಿತ ಭೇಟಿ ನೀಡಿದರು.
ಕಂದಾಯ ವಿಭಾಗ ಭೂಮಿ ವಿಭಾಗ, ಸ್ವೀಕೃತಿ ಕೇಂದ್ರ ಹಾಗೂ ದಾಖಲೆ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಾಖಲೆ ಕೇಂದ್ರದಲ್ಲಿ ಕೊಡುವ ದಾಖಲೆಗಳು ಸಿಗದೇ ಹಲವಾರು ಬಾರಿ ಅಲೆದಾಟ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರೊಬ್ಬರು ದೂರಿಕೊಂಡರು.
ಇದಲ್ಲದೆ ದಾಖಲೆ ವಿಭಾಗದಲ್ಲಿ ಬ್ರೋಕರುಗಳು ಹಣ ನೀಡುವವರಿಗೆ ಆದ್ಯತೆ ನೀಡಿ ದಾಖಲೆಗಳನ್ನು ಕೊಡುವ ಬಗ್ಗೆ ನನಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಭೇಟಿ ನೀಡಿದ್ದೇನೆ.
ನಿಗದಿತ ಅವಧಿಯಲ್ಲಿ ದಾಖಲೆಗಳು ಸಿಗುವಂತೆ ಮಾಡಲು ಯೋಜನೆ ರೂಪಿಸಿ ಎಂದು ಶಾಸಕರು ಸೂಚಿಸಿದ ಮೇರೆಗೆ
ಮುಂದಿನ ದಿನಗಳಲ್ಲಿ ಎಸ್ಎಮ್ಎಸ್ ಮುಖಾಂತರ ದಾಖಲೆಯನ್ನು ನೀಡುವ ಹಾಗೂ ಅವರಿಗೆ ಎಸ್ಎಂಎಸ್ ಮೂಲಕ ಮಾಹಿತಿಯನ್ನು ನೀಡಿ ಶುಲ್ಕ ಪಾವತಿ ಹಾಗೂ ದಾಖಲಿಸಿದ ವಾಗಿರುವ ಬಗ್ಗೆ ಮಾಹಿತಿ ರವಾನೆ ಕ್ರಮಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಮೋಹನ್ ಅವರು ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿಯನ್ನು ನೀಡಿದರು.
ಯಾವುದೇ ಕಾರಣಕ್ಕೂ ತಾಲೂಕು ಕಚೇರಿಗೆ ಜನರು ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ ಬೇಕಾದ ಕ್ರಮ ಕೈಗೊಳ್ಳಿ ಎಂದು ಶಾಸಕರು ಸೂಚಿಸಿದ.ತಾಲೂಕು ಕಚೇರಿಯ ದಾಖಲೆಯ ವಿಭಾಗದಲ್ಲಿ ಜೆರಾಕ್ಸ್ ಯಂತ್ರಪ್ರಿಂಟಿಂಗ್ ಯಂತ್ರಗಳು ಕೆಟ್ಟುಹೋಗಿದ್ದು ದುರಸ್ತಿಗೆ ಹಣ ನೀಡದೆಬಾಕಿಯಾಗಿದೆ. ಹೀಗಾಗಿ ದಾಖಲೆಗಳ ಪ್ರತಿಯನ್ನು ತೆಗೆಯಲು ಕೂಡ ಪರದಾಡುವ ಸ್ಥಿತಿ ಕಂಡು ಬಂತು.
ತಾಲೂಕು ದಂಡಾಧಿಕಾರಿ ಪುರಂದರ ಹೆಗ್ಡೆ ಉಪಸ್ಥಿತರಿದ್ದರು.
Kshetra Samachara
06/03/2022 10:00 am