ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಕ್ಕಾರು:ಹದಗೆಟ್ಟ ಸ್ಥಿತಿಯಲ್ಲಿದ್ದ ರಸ್ತೆಗೆ ಕಾಂಕ್ರಿಟೀಕರಣ ಭಾಗ್ಯ

ಬಜಪೆ:ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಕ್ಕಾರು ದುರ್ಗಾನಗರದಿಂದ ತೆಂಕ ಎಕ್ಕಾರು ಗ್ರಾಮದ ಕಾವೆರಬೆಟ್ಟು ಎಂಬಲ್ಲಿಗೆ ಸಂಪರ್ಕಿಸುವ ರಸ್ತೆಯು ಕಳೆದ ಹಲವು ವರ್ಷಗಳಿಂದ ಹದಗೆಟ್ಟ ಸ್ಥಿತಿಯಲ್ಲಿದ್ದು,ಇದೀಗ ಈ ರಸ್ತೆಗೆ ಕಾಂಕ್ರಿಟೀಕರಣ ಭಾಗ್ಯ ದೊರಕಿದೆ.ಹಲವು ಮನೆಗಳಿಗೆ ಸಂಪರ್ಕ ಕಲ್ಪಿಸುವಂತಹ ರಸ್ತೆ ಇದಾಗಿದೆ.

ರಸ್ತೆ ಕಾಂಕ್ರಿಟೀಕರಣದಿಂದ ಈ ಭಾಗದ ಗ್ರಾಮಸ್ಥರ ಹಲವು ವರ್ಷಗಳ ಕನಸು ನನಸಾಗಿದೆ.ಶಾಸಕರ ಅನುದಾನದಲ್ಲಿ ಸುಮಾರು 10 ಲಕ್ಷ ರೂ ಗಳಲ್ಲಿ ಈ ರಸ್ತೆಯು ಕಾಂಕ್ರೀಟಿಕರಣಗೊಂಡಿದೆ.ಈ ಬಗ್ಗೆ ಸ್ಪಂದಿಸಿದ ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಸಂಬಂಧಪಟ್ಟ ಎಕ್ಕಾರು ಗ್ರಾಮ ಪಂಚಾಯತ್ ನ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಗ್ರಾಮಸ್ಥರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

04/03/2022 06:39 pm

Cinque Terre

1.99 K

Cinque Terre

0

ಸಂಬಂಧಿತ ಸುದ್ದಿ