ಬಜಪೆ:ಗಂಜಿಮಠ ಸಮೀಪದ ನಾರಳದ ಶ್ರೀ ಸೀತಾರಾಮ ಭಜನಾ ಮಂದಿರದ 63ನೇ ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ 23 ನೆ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಫೆ.27ರಂದು ನಡೆಯಿತು.
ಅಂದು ಬೆಳಿಗ್ಗೆ ಪ್ರಾರ್ಥನೆ, ಗಣಪತಿ ಹೋಮ,ಸಾರ್ವಜನಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಾವರ್ಧಕ ಯುವಕ ಮಂಡಲ ನಾರಾಳ ಸಂಕೇಶ ಇದರ ಪ್ರಾಯೋಜಕತ್ವದಲ್ಲಿ ಪ್ರಬುದ್ಧ ಹವ್ಯಾಸಿ ಯಕ್ಷಗಾನ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ ಇಂದ್ರಜಿತು ಕಾಳಗ ನಡೆಯಿತು.ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ರಾತ್ರಿ ಮಹಾಪೂಜೆ ಹಾಗೂ ಮರುದಿನ ಬೆಳಿಗ್ಗೆ ಮಂಗಲೋತ್ಸವ ಪೂಜೆಯು ವಿಜ್ರಂಭಣೆಯಿಂದ ನಡೆಯಿತು.
Kshetra Samachara
28/02/2022 11:00 am