ಮಂಗಳೂರು:ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಟಿಪಳ್ಳ ಮೂರನೇ ವಾರ್ಡಿನ ಒಂದನೇ ಬ್ಲಾಕ್ ನಿವಾಸಿ ಶ್ರೀಮತಿ ಉಷಾ ಅವರ ಮನೆಗೆ ಮಂಗಳೂರು ಮಹಾನಗರಪಾಲಿಕೆ ಮತ್ತು ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ವತಿಯಿಂದ ಕುಟೀರ ಜ್ಯೋತಿ ಯೋಜನೆ ಅಡಿಯಲ್ಲಿ ಮನೆಯ ವಿದ್ಯುತ್ ಸಂಪರ್ಕಕ್ಕೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿಯವರು ಸ್ವಿಚ್ ಆನ್ ಮಾಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ, ಮಂಡಲ ಸದಸ್ಯ ಜಯ ಕುಮಾರ್, ಮಹಿಳಾ ಮೋರ್ಚಾದ ಕಾರ್ಯದರ್ಶಿ ಶೈಲಜಾ ಗಣೇಶಕಟ್ಟೆ, ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ವಾದಿರಾಜ್, ಅಭ್ಯುದಯ ಭಾರತೀಯ ಸೇವಾ ಟ್ರಸ್ಟ್ ನ ವಸಂತರಾವ್, ಎಲೆಕ್ಟ್ರಿಕಲ್ ಕಾಂಟ್ಯಾಕ್ಟರ್ ಹರೀಶ್ ಶೆಟ್ಟಿ, ಬೂತ್ ಅಧ್ಯಕ್ಷ ಮಾಧವ, ರೇಶ್ಮಾ ಡಿ ಸೋಜಾ, ಗಿರಿಧರ್, ದೇವೆಂದ್ರ, ಲತೇಶ್ ಬೊಳ್ಳಾಜೆ, ಗಣೇಶ್ ಸಾಲಿಯಾನ್ ಗಣೇಶಕಟ್ಟೆ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
28/02/2022 07:57 am