ಬಜಪೆ:ಬಜಪೆಯಿಂದ ಹಳೆ ವಿಮಾನ ನಿಲ್ದಾಣಕ್ಕೆ ಸಾಗುವಂತಹ ರಸ್ತೆಯ ಮುರನಗರ ಜಂಕ್ಷನ್ ನ ಸಮೀಪದ ಶಾಲಾ ಬಳಿಯ ಗುಡ್ಡಕ್ಕೆ ಬೆಂಕಿ ಬಿದ್ದ ಘಟನೆ ಇಂದು ಮಧ್ಯಾಹ್ನ ಸುಮಾರಿಗೆ ನಡೆದಿದೆ.ಗುಡ್ಡದ ಸುತ್ತಮುತ್ತಲೂ ಒಣಗಿದ ಹುಲ್ಲು ತುಂಬಿದ್ದು,ಏಕಾ ಏಕಿ ಬೆಂಕಿ ತಗುಲಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕೂಡಲೇ ಎಚ್ಚೆತ್ತ ಸ್ಥಳೀಯರು ಪೊಲೀಸರಿಗೆ ಹಾಗೂ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದರು.ಮಧ್ಯಾಹ್ನದ ಸುಡು ಬಿಸಿಲಿನ ಸಮಯವಾದ್ದರಿಂದ ಬೆಂಕಿಯನ್ನು ನಂದಿಸಲು ಸಿಬ್ಬಂದಿಗಳು ಹರಸಾಹಸ ಪಡುವಂತಾಯಿತು.ಈ ವೇಳೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದರು.
ಕೂಡಲೇ ಎಚ್ಚೆತ್ತ ಪೊಲೀಸರು ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿಯವರ ಕಾರ್ಯದಿಂದ ಆಗಬಹುದಾದ ಭಾರೀ ಅಗ್ನಿ ಅನಾಹುತವೊಂದು ತಪ್ಪಿದೆ.ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
Kshetra Samachara
16/02/2022 09:58 pm