ಬಜಪೆ : ಮೋದಿಯವರ ಆರೋಗ್ಯ ದೃಷ್ಟಿಯಿಂದ ಜಿಲ್ಲೆ, ರಾಜ್ಯ ದೇಶಾದ್ಯಂತ ಮೃತ್ಯುಂಜಯ ಹೋಮ ನಡೆಯುತ್ತಿದೆ. ಮೊದಲಿಗೆ ಇದರ ಲೆಕ್ಕಕ್ಕೆ ಸಿಗುತ್ತಿದ್ದರೆ,ದೇಶವಾಸಿಗಳು ಸ್ವ-ಇಚ್ಛೆಯಿಂದ ಪೂಜೆ ಮಾಡುತ್ತಿದ್ದಾರೆ.
ಇವರೆಲ್ಲ ದೇಶ ನಡೆಸುವ ಪ್ರಧಾನಿ ನರೇಂದ್ರ ಮೋದೀಜಿಯವರಲ್ಲಿ ಅಪಾರವಾದ ವಿಶ್ವಾಸ ಹೊಂದಿದ್ದಾರೆ. ಇದರಲ್ಲಿ ಎಳ್ಳಷ್ಟೂ ರಾಜಕೀಯ ಉದ್ದೇಶವಿಲ್ಲ ಎಂದು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಗುರುಪುರ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮೂಳೂರು ಅಡ್ಡೂರು ಮತ್ತು ಗುರುಪುರದ ಸಮಸ್ತ ಹಿಂದೂ ಬಾಂಧವರ ಪರವಾಗಿ ಪ್ರಧಾನಿ ಮೋದಿಯವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಆಯೋಜಿಸಲಾದ ``ಮೃತ್ಯುಂಜಯ ಹೋಮ'ದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಂಗಳಾದೇವಿಯ ಸುಬ್ರಹ್ಮಣ್ಯ ಭಟ್ ಮತ್ತು ವಿಶ್ವಾಸ್ ಭಟ್ ಪೂಜೆ ನೆರವೇರಿಸಿದರು. ದೇವಸ್ಥಾನದ ಅರ್ಚಕರಾದ ಜಿ ಕೆ ಕೃಷ್ಣ ಭಟ್ ಮತ್ತು ಜಿ ಕೆ ಚಂದ್ರಶೇಖರ ಭಟ್ ಸಹಕರಿಸಿದರು.
ಪೂಜೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಬಡಕರೆಗುತ್ತು, ಗುರುಪುರ ಪಂಚಾಯತ್ ಸದಸ್ಯರಾದ ಜಿ ಎಂ ಉದಯ ಭಟ್, ಸಚಿನ್ ಅಡಪ, ರಾಜೇಶ್ ಸುವರ್ಣ, ಹರೀಶ್ ಬಳ್ಳಿ, ಸುನಿಲ್ ಜಲ್ಲಿಗುಡ್ಡೆ, ನಳಿನಿ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಪುರಂದರ ಮಲ್ಲಿ ಹಾಗೂ ಇನ್ನಿತರ ನೂರಾರು ಮಂದಿ ಭಾಗವಹಿಸಿದ್ದರು.
Kshetra Samachara
07/02/2022 12:15 pm