ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀ ವಜ್ರದೇಹಿ ಮಠದಲ್ಲಿ 'ಚೂಡಾಮಣಿ' ತಾಳಮದ್ದಳೆ

ಬಜಪೆ : ಗುರುಪುರ ಶ್ರೀ ವಜ್ರದೇಹಿ ಮಠದಲ್ಲಿ ನಡೆಯುತ್ತಿರುವ `ವಜ್ರದೇಹಿ ಜಾತ್ರೆ'ಯ ಪ್ರಯುಕ್ತ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜ. 3ರಂದು ಸಂಜೆ ಮಠದ ಆವರಣದಲ್ಲಿ ಆಯೋಜಿಸಲಾದ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಪಾರ್ತಿಸುಬ್ಬ ರಚಿತ `ಚೂಡಾಮಣಿ' ಯಕ್ಷಗಾನ ತಾಳಮದ್ದಳೆ ಜರುಗಿತು.

ಕಲಾವಿದರಾಗಿ ಶುಭಾ ಅಡಿಗೆ ಪುತ್ತೂರು(ರಾವಣ), ಉಪನ್ಯಾಸಕಿ ಸಾಯಿ ಸುಮನಾ ನಾವಡ(ಸೀತೆ), ಕಿಶೋರಿ ದುಗ್ಗಪ್ಪ(ಸರಮೆ), ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆ(ಹನುಮಂತ), ಹಿಮ್ಮೇಳದಲ್ಲಿ ಭಾಗವತರಾಗಿ ಯಕ್ಷಗಾನ ಕಲಾವಿದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಪುತ್ರ, ಇಂಜಿನಿಯರ್ ವೃತ್ತಿಯ ಭರತ್‍ರಾಜ್ ಶೆಟ್ಟಿ, ಮದ್ದಳೆಯಲ್ಲಿ ಸತ್ಯಜೀತ್ ರಾವ್ ರಾಯ್, ಚೆಂಡೆಯಲ್ಲಿ ಮಾ. ಸಮರ್ಥ್ ಕತ್ತಲ್‍ಸಾರ್, ಚಕ್ರತಾಳದಲ್ಲಿ ಶ್ರೀರಾಮ ಶರ್ಮ ತಳಕಲ ಸಹಕರಿಸಿದರು.

Edited By : PublicNext Desk
Kshetra Samachara

Kshetra Samachara

04/01/2022 09:22 pm

Cinque Terre

2.38 K

Cinque Terre

0

ಸಂಬಂಧಿತ ಸುದ್ದಿ