ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭರದಿಂದ ಸಾಗುತ್ತಿದೆ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರ

ಬಂಟ್ವಾಳ: ನೇತ್ರಾವತಿ ನದಿ ತಟದಲ್ಲಿ ಯುಗಾಂತರದಲ್ಲಿ  ಶ್ರೀ ಶರಭಂಗ ಮುನಿಗಳ ದಿವ್ಯ ಹಸ್ತದಿಂದ ಪ್ರತಿಷ್ಠಾಪಿಸಿಕೊಂಡು ಅರ್ಚಿತವಾದ ಕಾಲಾಂತರದಲ್ಲಿ ವಿಜಯ ನಗರ ಸಾಮ್ರಾಜ್ಯದ ಸಾಮಂತ  ಕೆಳದಿಯ ಅರಸರಿಂದ ನಿರ್ದೇಶಸಲ್ಪಟ್ಟು ಹಲ್ಸನಾಡು ವಂಶಜರಿಂದ ನಿರ್ಮಾಣಗೊಂಡಿದ್ದ  ಶ್ರೀ ಶರಭೇಶ್ವರ ದೇವರ ದೇವಾಲಯದ ಜೀರ್ಣೋದ್ಧಾರ ಪ್ರಕ್ರಿಯೆಯು ಭಕ್ತ  ಬಾಂಧವರ ಅಭೀಷ್ಟದಂತೆ ಇದೀಗ ಉಡುಪಿ ಶ್ರೀ ಪೇಜಾವರ ಸ್ವಾಮೀಜಿ ಹಾಗೂ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಜರಗುತ್ತಿದೆ.

ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಸರಪಾಡಿಯಲ್ಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಈ ಪುರಾತನ ಪವಿತ್ರ ದೇವಸ್ಥಾನ ಮತ್ತು ಪರಿವಾರ ದೇವರು ಮತ್ತು ದೈವಗಳನ್ನು ಆಗಮಶಾಸ್ತ್ರಕ್ಕೆ ಸರಿಯಾಗಿ ದೇವಸ್ಥಾನ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ವಾಸ್ತುಶಿಲ್ಪಿ ಮಹೇಶ್ ಭಟ್ ಮುನಿಯಂಗಳ ಅವರ ಮಾರ್ಗದರ್ಶನದಂತೆ ಮೂಲ ಶ್ರೀ ಶರಭೇಶ್ವರ ದೇವರ ಗರ್ಭಗುಡಿ, ತೀರ್ಥಮಂಟಪ, ಸುತ್ತು ಪೌಳಿ, ಧ್ವಜಸ್ತಂಭ, ಹನುಮಂತ ದೇವರ ಗುಡಿ, ಗಣಪತಿ ದೇವರ ಗುಡಿ, ಮಹಿಷಮರ್ಧಿನಿ ದೇವರ ಗುಡಿ, ನಾಗದೇವರ ಬನ ಸೇರಿದಂತೆ ಕ್ಷೇತ್ರದ ನೀಲನಕಾಶೆ ಸಿದ್ಧಪಡಿಸಿ ಸುಮಾರು 7 ಕೋ.ರೂ. ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ.

ಜೀರ್ಣೋದ್ಧಾರ ಕಾರ್ಯಗಳು ಸುಗಮವಾಗಿ ಸಾಗುವ ನಿಟ್ಟಿನಲ್ಲಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ ಅವರ ಸಂಚಾಲಕತ್ವದಲ್ಲಿ ಜೀರ್ಣೋದ್ಧಾರ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಎಂ.ಎಸ್.ಶೆಟ್ಟಿ ಸರಪಾಡಿ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅವರ ಮುಂದಾಳತ್ವದಲ್ಲಿ ಜನಪ್ರತಿನಿಧಿಗಳು, ಊರ-ಪರವೂರ ಭಕ್ತರ ಕೂಡುವಿಕೆಯಲ್ಲಿ ಸಮಿತಿಯು ಕೆಲಸ ಮಾಡುತ್ತಿದೆ.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಅನುದಾನದಲ್ಲಿ 2 ಕೋ.ರೂ.ಗಳ ಸುಸಜ್ಜಿತ ರಥಬೀದಿ, ಸಂಪರ್ಕ ರಸ್ತೆ ನಿರ್ಮಾಣಗೊಂಡಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸಿಗುವ ಅನುದಾನಗಳನ್ನು ದೊರಕಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ.

ಪ್ರಸ್ತುತ ಕ್ಷೇತ್ರದ ಗರ್ಭಗುಡಿ, ತೀರ್ಥಮಂಟಪ, ಸುತ್ತುಪೌಳಿಯ ಕೆಲಸಗಳು ಪ್ರಗತಿಯಲ್ಲಿದ್ದು, ಸುಳ್ಯದ ಗೂನಡ್ಕದಿಂದ ಧ್ವಜಸ್ತಂಭ(ಕೊಡಿಮರ) ತರುವುದಾಗಿ ತೀರ್ಮಾನಿಸಿ ಸಿದ್ಧತಾ ಕಾರ್ಯಗಳು ನಡೆದಿದೆ. ಡಿ. 25ರಂದು ಬೆಳಗ್ಗೆ ಗೂನಡ್ಕದಿಂದ ಹೊರಟು ಬಿ.ಸಿ.ರೋಡಿನ ಗೋಲ್ಡನ್‌ಪಾರ್ಕ್ ಮೈದಾನದಲ್ಲಿ ನಿಲ್ಲಿಸಲಾಗುತ್ತದೆ. ಡಿ. 26ರ ಮಧ್ಯಾಹ್ನ 2ಕ್ಕೆ ಅಲ್ಲಿಂದ ಭವ್ಯ ಮೆರವಣಿಗೆಯಲ್ಲಿ ಕೊಡಿಮರವನ್ನು ಸರಪಾಡಿಗೆ ಸಾಗಿಸಲಾಗುತ್ತದೆ.

ಈ ಸಂದರ್ಭದಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವರಾದ ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ, ಬಂಟ್ವಾಳ ಬಿಲ್ಲವ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಉದ್ಯಮಿಗಳಾದ ಭಾಸ್ಕರ ಶೆಟ್ಟಿ ಪೂನಾ, ಕೆ.ಎನ್.ವಿಠಲ ಶೆಟ್ಟಿ, ನಡುಮೊಗರುಗುತ್ತು, ಸಂಜೀವ ಪೂಜಾರಿ ಗುರುಕೃಪಾ, ಹರೀಶ್ ಕಂಜಿಪಿಲಿ ಸುಳ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಾನಂದ ಪಿ., ಜೀರ್ಣೋದ್ಧಾರ ಸಮಿತಿ ಸಂಚಾಲಕ ಡಾ| ಎಂ.ಮೋಹನ್ ಆಳ್ವ ಮೊದಲಾದವರು ಭಾಗವಹಿಸಲಿದ್ದಾರೆ.

ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ, ಆರ್ಥಿಕ ಸಮಿತಿ ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ, ಬಾಚಕೆರೆ ಕ್ಷೇತ್ರದ ಧರ್ಮದರ್ಶಿ ದೇವಪ್ಪ ಬಾಚಕೆರೆ, ಆಡಳಿತ ಮೊಕ್ತೇಸರ ವಿಠಲ್ ಎಂ.ಆರುಮುಡಿ, ಉಮೇಶ್ ಆಳ್ವ ಕೊಟ್ಟುಂಜ, ಗಿರಿಧರ್ ಮಠದಬೆಟ್ಟು, ದಯಾನಂದ ಪೂಜಾರಿ ಕೋಡಿ, ದಯಾವತಿ ಮಠದಬೆಟ್ಟು, ಪ್ರಮುಖರಾದ ಕುಸುಮಾಕರ ಶೆಟ್ಟಿ ಕುರ್ಯಾಳ, ರಾಧಾಕೃಷ್ಣ ರೈ ಕೊಟ್ಟುಂಜ, ಪುರುಷೋತ್ತಮ ಪೂಜಾರಿ ಮಜಲು, ಆನಂದ ಶೆಟ್ಟಿ ಆರುಮುಡಿ, ಚಂದ್ರಶೇಖರ ಶೆಟ್ಟಿ ಅರಸೊಳಿಗೆ, ಸುಂದರ ಶೆಟ್ಟಿ ಹೊಳ್ಳರಗುತ್ತು, ಗಿರೀಶ್ ನಾಯ್ಕ್ ನೀರಪಲ್ಕೆ ಮೊದಲಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

22/12/2021 11:12 am

Cinque Terre

902

Cinque Terre

0

ಸಂಬಂಧಿತ ಸುದ್ದಿ