ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ ಕಸ್ಬಾ ನಿವಾಸಿ ಮಹಿಳೆಗೆ ಜೀವಬೆದರಿಕೆ: ಮಹಿಳೆಯಿಂದ ದೂರು, ಪ್ರಕರಣ ದಾಖಲು

ಬಂಟ್ವಾಳ : ಬಂಟ್ವಾಳ ಕಸ್ಬಾ ನಿವಾಸಿ ಮಹಿಳೆಯೊಬ್ಬರು ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದು, ತನಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮಹಿಳೆಯ ಪತಿ ನಿಧನ ಹೊಂದಿದ್ದು, ಒಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದ ಸಂದರ್ಭ ಮೈದುನ ಇಲ್ಲಸಲ್ಲದ ಆರೋಪ ಮಾಡಿ, ಅವಮಾನ ಮಾಡುತ್ತಿರುವುದಲ್ಲದೆ, ತಕರಾರು ತೆಗೆಯುತ್ತಿದ್ದು, ಮನೆ ಬಿಟ್ಟು ಹೋಗದಿದ್ದರೆ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಯಿಸುವೆ ಎಂದು ಬೆದರಿಕೆ ಒಡ್ಡಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

19/12/2021 09:31 am

Cinque Terre

1.52 K

Cinque Terre

0

ಸಂಬಂಧಿತ ಸುದ್ದಿ