ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಿಕ್ಷಾ ಪಾರ್ಕ್ ನ ಉದ್ಘಾಟನೆ

ಬಜಪೆ:ಹಿರಿಯ ಸಮಾಜ ಸೇವಕ ಸೌಂದರ್ಯ ರಮೇಶ್ ಅವರು ನಿರ್ಮಿಸಿಕೊಟ್ಟ "ಕಟೀಲು-ಅಜಾರು ರಿಕ್ಷಾ ಪಾರ್ಕ್ ನ್ನು ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀ ಅನಂತಪದ್ಮನಾಭ ಆಸ್ರಣ್ಣ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಂಜೀವಿನಿ ಟ್ರಸ್ಟ್ ಮುಂಬಯಿಯ ಅಧ್ಯಕ್ಷ ಡಾ. ಸುರೇಶ್ ರಾವ್, ಸಮಾಜ ಸೇವಕ ,ಉದ್ಯಮಿ ಸೌಂದರ್ಯ ರಮೇಶ್, ಜೋಸೆಫ್,ಕಟೀಲು ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ ಮೂಲ್ಯ ,ಕಟೀಲು - ಅಜಾರು ರಿಕ್ಷಾ ಚಾಲಕ ಮಾಲಕರ ಸಂಘದ ಸರ್ವಸದಸ್ಯರುಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಡಾ.ಸುರೇಶ್ ರಾವ್ ಇವರನ್ನು ಸೌಂದರ್ಯ ಸಮೂಹ ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.

Edited By : PublicNext Desk
Kshetra Samachara

Kshetra Samachara

30/11/2021 02:10 pm

Cinque Terre

2.58 K

Cinque Terre

0

ಸಂಬಂಧಿತ ಸುದ್ದಿ