ಬಂಟ್ವಾಳ: ಹಿಂದುತ್ವದ ಶಬ್ದವನ್ನು ಇತ್ತೀಚೆಗೆ ಕೆಲ ಮುಖಂಡರು ವಿರೋಧಿಸುತ್ತಿದ್ದು, ಹಿಂದು ದೇವರನ್ನು ಹಾಗೂ ಧರ್ಮವನ್ನು ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಹಿಂದು ಜನಜಾಗೃತಿ ಸಮಿತಿ ಈ ಕುರಿತು ಬಂಟ್ವಾಳ ತಹಸೀಲ್ದಾರ್ ಗೆ ಮನವಿಯೊಂದನ್ನು ಸಲ್ಲಿಸಿದೆ.
ರಾಹುಲ್ ಗಾಂಧಿ ಮತ್ತು ಸಲ್ಮಾನ್ ಖುರ್ಷಿದ್ ಅವರ ಹೇಳಿಕೆಗಳು ಹಿಂದು ವಿರೋಧಿಯಾಗಿದೆ ಎಂದು ದೂರಿರುವ ಸಮಿತಿ, ಕೋಲಾರದಲ್ಲಿ ದತ್ತಮಾಲಾ ಭಕ್ತಾದಿಗಳ ಮೇಲಾದ ಆಕ್ರಮಣ ಮತ್ತು ಮಾರಾಣಾಂತಿಕ ಹಲ್ಲೆ ನಡೆಸಿದ ಅಪರಾಧಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದೆ. ಬಂಟ್ವಾಳ ಮಿನಿವಿಧಾನಸೌಧದಲ್ಲಿ ಉಪತಹಶೀಲ್ದಾರ್ ನರೇಂದ್ರನಾಥ್ ಮಿತ್ತೂರು ಮೂಲಕ ಸರ್ಕಾರಕ್ಕೆ ಮನವಿಯನ್ನು ನೀಡಲಾಯಿತು. ಈ ಸಂದರ್ಭ ಹಿಂದೂ ಜನಜಾಗೃತಿ ಸಮಿತಿಯ ಉಪೇಂದ್ರ ಆಚಾರ್ಯ, ಜಯಕುಮಾರ್, ಪಾಲಕ್ಷ, ರಾಧಾಕೃಷ್ಣ, ರವಿಚಂದ್ರ ಗಿರಿ, ಪ್ರಮುಖರಾದ ಯಾದೇಶ ಬೆಂಜನಪದವು, ನಾಗೇಶ್ ಬಿಸಿರೋಡು, ರಾಜೇಶ್ ಬಂಟ್ವಾಳ, ದಿಲೀಪ್,ಸೋಮನಾಥ್, ಸೋಮಶೇಖರ್ ಇದ್ದರು.
Kshetra Samachara
17/11/2021 05:46 pm