ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ನಿಟಿಲಾಪುರದಲ್ಲಿ ಭಜನೋತ್ಸವ ಸಂಪನ್ನ

ಬಂಟ್ವಾಳ: ಕಲ್ಲಡ್ಕ ಸಮೀಪದ ನಿಟಿಲಾಪುರ(ನೆಟ್ಲ) ಮೊಗರನಾಡು ಸಾವಿರ ಸೀಮೆಯ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ನ. 15ರ ಸೂರ್ಯೋದಯದಿಂದ ಆರಂಭಗೊಂಡ ಕಾರ್ತಿಕ ಅಖಂಡ ಭಜನೋತ್ಸವವು ಮಂಗಳವಾರ ಮುಂಜಾನೆ ಮಂಗಳೋತ್ಸವದೊಂದಿಗೆ ಸಮಾಪ್ತಿಗೊಂಡಿತು.

ಕಾರ್ಯಕ್ರಮದಲ್ಲಿ ನ. 15ರಂದು ಮುಂಜಾನೆ ಭಜನೆ ಪ್ರಾರಂಭ ಪ್ರಾರಂಭಗೊಂಡಿದ್ದು, ಗಣಪತಿ ಹೋಮ, ವಾರ್ಷಿಕ ಶತರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದೇವರಿಗೆ ರಂಗಪೂಜೆ ನಡೆದವು. ಮಂಗಳವಾರ ಮುಂಜಾನೆ ಭಜನಾ ಮಂಗಳೋತ್ಸವದ ಬಳಿಕ ಪ್ರಸಾದ ವಿತರಣೆ ನಡೆಯಿತು. ಜತೆಗೆ ಒಟ್ಟು 9 ಬಾರಿ ಜಾಮ ಪೂಜೆಗಳು ನಡೆದವು.

ಭಜನಾ ಕಾರ್ಯದಲ್ಲಿ ಸುಮಾರು 20ಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದವು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸುಬ್ರಹ್ಮಣ್ಯ ಭಟ್, ಪ್ರಧಾನ ಅರ್ಚಕ ಸಂಪ್ರೀತ್ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ಕುಮಾರಸ್ವಾಮಿ ನೆಟ್ಲ, ನವೀನ್ಕುಮಾರ್ ಶೆಟ್ಟಿ ಚನಿಲ, ಸುಜಿತ್ಕುಮಾರ್ ಕಲ್ಲಡ್ಕ, ಅನಿಲ್ಕುಮಾರ್ ನೆಟ್ಲ, ದಿವ್ಯಾ ರಮೇಶ್ ಪೂಜಾರಿ ಹೊಸಕಟ್ಟ, ಸುಚಿತ್ರಾ ಅನಂತ ಭಟ್ ಪಳನೀರು, ಭವ್ಯಾ ಐತಪ್ಪ ನಾಯ್ಕ ನೆಟ್ಲ ಮೊದಲಾದವರು ಪಾಲ್ಗೊಂಡಿದ್ದರು.

Edited By : PublicNext Desk
Kshetra Samachara

Kshetra Samachara

17/11/2021 05:42 pm

Cinque Terre

1.6 K

Cinque Terre

0

ಸಂಬಂಧಿತ ಸುದ್ದಿ