ಬಂಟ್ವಾಳ: ಬಂಟ್ವಾಳ ಮತ್ತು ಮಂಗಳೂರು ತಾಲೂಕು ಸಂಪರ್ಕಿಸುವ ಮೂಲರಪಟ್ಣ ಸೇತುವೆ ಶುಕ್ರವಾರ ಸಂಚಾರಕ್ಕೆ ಮುಕ್ತಗೊಂಡಿತು. ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವೈ ಸಹಿತ ಪ್ರಮುಖರು ಸೇತುವೆಯುದ್ದಕ್ಕೂ ಊರವರೊಂದಿಗೆ ಸಂಚರಿಸಿದರು.
ಬಹುಬೇಡಿಕೆಯ ಸೇತುವೆ ಎನಿಸಿಕೊಂಡಿರುವ ಮೂಲರಪಟ್ಣ ಸೇತುವೆ ಸುಮಾರು 13 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಮಂಗಳೂರು ಹಾಗೂ ಬಂಟ್ವಾಳ ತಾಲೂಕನ್ನು ಬೆಸೆಯುವ ಸೇತುವೆಯು 2018ರಲ್ಲಿ ಏಕಾಏಕಿ ಮಳೆಗೆ ಕುಸಿದು ರಾಜ್ಯದ ಗಮನ ಸೆಳೆದಿತ್ತು. ಸೇತುವೆ ಇಲ್ಲದೆ ಈ ಭಾಗದ ಬಸ್ಸು ಸಂಪರ್ಕ, ವಾಹನ ಸಂಚಾರ ಕಡಿತಗೊಂಡು ಸಾರ್ವಜನಿಕರು ಸಾಕಷ್ಟು ತೊಂದರೆಗೊಳಗಾಗಿದ್ದರು.
Kshetra Samachara
12/11/2021 03:57 pm