ಬಜಪೆ:ಬಾಲ್ಯದಲ್ಲಿ ತಾಯಿ ಎದೆಹಾಲು ಕುಡಿದರೆ ಮತ್ತೆ ಜೀವನವಿಡೀ ನಾವು ಗೋಮಾತೆಯ ಹಾಲು ಕುಡಿದು ಬದುಕುತ್ತೇವೆ ಎಂದು ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮಿಗಳು ಹೇಳಿದರು ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ನಂದಿನೀ ಗೋಶಾಲೆಯ ಉದ್ಘಟನೆ ಮತ್ತು ಗೋಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು ಕಾರ್ಯಕ್ರಮದಲ್ಲಿ ನೂತನ ಗೋಶಾಲೆಯಲ್ಲಿ ಕಪಿಲ ದನಕರುವಿಗೆ ಗೋಪೂಜೆ ನೆರವೇರಿಸಲಾಯಿತು ಈ ಸಂದರ್ಭ ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ , ದೇವಳದ ಮುಕ್ತೇಸರರಾದ ವಾಸುದೇವ ಆಸ್ರಣ್ಣ, ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಗಿರೀಶ್ ಶೆಟ್ಟಿ ಕಟೀಲು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
06/11/2021 11:28 am