ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಕ್ಕಾರು:ಎಕ್ಕಾರು ವಿಜಯ ಯುವ ಸಂಗಮದ ವತಿಯಿಂದ ಮನೆ ಹಸ್ತಾಂತರ

ಬಜಪೆ :ರಜತ ಸಂಭ್ರಮದಲ್ಲಿರುವ ವಿಜಯ ಯುವ ಸಂಗಮವು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತ ಬರುತ್ತಿದ್ದು, ಸಂಗಮದ ಈ ಕಾರ್ಯ ಶ್ಲಾಘನೀಯ.ಸಮಾಜದಲ್ಲಿನ ಅಶಕ್ತರಿಗೆ ಸಹಾಯ ನೀಡುವುದು ಮಾನವ ಧರ್ಮ ಎಂದು ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು ಅವರು ಇಂದು ವಿಜಯ ಯುವ ಸಂಗಮ (ರಿ) ಎಕ್ಕಾರು ಇದರ ರಜತ ವಿಜಯ ರಜತ ವರ್ಷದ ಅಂಗವಾಗಿ ಎಕ್ಕಾರು ಗ್ರಾಮದ ಕೆಂಚಗುಡ್ಡೆ ನಿವಾಸಿಗಳಾದ ವಿಮಲ ಕೇಶವ ದಂಪತಿಗಳಿಗೆ ಸಂಸ್ಥೆ ವತಿಯಿಂದ ನಿರ್ಮಿಸಲಾದ ಮನೆ ಸಂಗಮ ದ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯಪತ್ರಕರ್ತೆ ವಿಜಯಲಕ್ಷೀ ಶಿಬರೂರು ಮಾತನಾಡಿ ಸರಕಾರ ಮಾಡದಂತಹ ಕೆಲಸವನ್ನು ಒಂದು ಸಂಸ್ಥೆ ಮಾಡುದೆಂದರೆ ಅದು ಅಭಿನಂದನೀಯ ಜಾತಿ ಧರ್ಮವನ್ನು ಮೀರಿ ಕಷ್ಟದಲ್ಲಿರುವವರಿಗೆ ಸಾಮಾಜಿಕ ಚಟುವಟಿಕೆಗಳು ಮುಂದುವರಿದರೆ ಬಡತನ ನಿರ್ಮೂಲನೆ ಸಾದ್ಯ, 25 ನೇ ವರ್ಷದ ಸಂಭ್ರಮದಲ್ಲಿ ಸಂಸ್ಥೆ ಅತ್ಯುತ್ತಮ ಕಾರ್ಯಕ್ರಮ ಹಮ್ಮಿಕೊಂಡಿರುದು ಅಭಿನಂದನೀಯ ಇಂತಹ ಕಾರ್ಯಕ್ರಮ ಸಂಸ್ಥೆಯಿಂದ ನಿರಂತರ ಮುಂದುವರಿಯಲಿ ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತೆ ವಿಜಯಲಕ್ಷೀ ಶಿಬರೂರು ಮತ್ತು ಬಾಸ್ಕರ ಭಟ್ ಎಕ್ಕಾರು ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಎಕ್ಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುರೇಖ ರೈ, ವಿಜಯ ಟೈಮ್ಸ್ ನ ವಿಜಯಲಕ್ಷೀ ಶಿಬರೂರು, ಬಿಜೆಪಿ ಮಂಡಲಾಧ್ಯಕ್ಷ ಸುನೀಲ್ ಅಳ್ವ, ಬಿಜೆಪಿ ಮುಖಂಡರಾದ ಕಸ್ತೂರಿ ಪಂಜ, ಈಶ್ವರ್ ಕಟೀಲ್, ಕಾರ್ಪೋರೇಟರ್ ಬಾಸ್ಕರಚಂದ್ರ ಶೆಟ್ಟಿ,ಸಂಸ್ಥೆಯ ಅಧ್ಯಕ್ಷ ಆದರ್ಶ್ ಶೆಟ್ಟಿ ಎಕ್ಕಾರು. ಗೌರವಾಧ್ಯಕ್ಷ ರತ್ನಾಕರ ಶೆಟ್ಟಿ ಎಕ್ಕಾರು ಸ್ವಾಗತಿಸಿ, ರಾಜೇಂದ್ರಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

24/10/2021 09:11 pm

Cinque Terre

2.49 K

Cinque Terre

0

ಸಂಬಂಧಿತ ಸುದ್ದಿ