ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಕೇಂದ್ರ ನೀತಿ ವಿರೋಧಿಸಿ ರೈತರ ಜಿಲ್ಲಾ ಮಟ್ಟದ ಪ್ರತಿಭಟನೆಯೊಂದು ಸೆ.27ರಂದು ನಡೆಯಲಿದೆ. ಈ ಕುರಿತು ಪೂರ್ವಭಾವಿ ಸಭೆ ಬಂಟ್ವಾಳದ ಸಿಐಟಿಯು ಕಚೇರಿಯಲ್ಲಿ ನಡೆಯಿತು.
ರೈತ-ದಲಿತ- ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆ ವೀರೋಧಿಸಿ ಯು.ಪಿ.ಸಿ.ಎಲ್. ವಿದ್ಯುತ್ ಉತ್ಪಾದನಾ ಘಟಕವೂ ರಚಿಸಲೂ ಉದ್ದೇಶಿಸಿರುವ ಉಡುಪಿ- ಕಾಸರಗೋಡು ವಿದ್ಯುತ್ ಪ್ರಸರಣಾ ಮಾರ್ಗದಿಂದಾಗುವ ದುಷ್ಪರಿಣಾಮ ವೀರೋಧಿಸಿ ಮತ್ತು ಅನಿಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತೀರ್ಮಾನಿಸಲಾಗಿದೆ.
ಒಕ್ಕೂಟದ ಸಂಯೋಜಕರಾದ ರವಿಕಿರಣ್ ಪುಣಚ, ಕೆ.ಯಾದವಶೆಟ್ಟಿ,ಕರ್ನಾಟಕ ಪ್ರಾಂತರೈತಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ ಸಾಲ್ಯಾನ್,ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ,ಜಿಲ್ಲಾ ಉಪಾಧ್ಯಕ್ಷರಾದ ಅಲ್ವೀನ್ ಮಿನೇಜಸ್,ಸುಳ್ಯ ತಾಲಯ ಅಧ್ಯಕ್ಷತಾದ ಲೋಲಾಜಾಕ್ಷ ಗೌಡ ಭೂತಕಲ್ಲು,ಬಂಟ್ವಾಳ ತಾಲೂಕು ಕೋಷಾಧಿಕಾರಿ ಡಿ.ಕೆ.ಶಾಹುಲ್ ಹಮೀದ್,ಸಂಘಟನಾ ಕಾರ್ಯದರ್ಶಿ ಸದಾನಂದ ಶೀತಲ್ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ,ಡಿವೈಎಫ್ಐ ಮುಖಂಡರಾದ ತುಳಸಿದಾಸ್ ವಿಟ್ಲ, ಕೆಆರ್ ಪಿಎಸ್ನ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಹರಿದಾಸ್ ಭಟ್ ಉಡುಪಿ- ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣಾ ಮಾರ್ಗದ ಅತಂಕಿತ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ರೋಯ್ ಕಾರ್ಲೋ, ಕಾರ್ಯದರ್ಶಿ ಬೆನಿಡಿಕ್ಟ್ ಕಾರ್ಲೋ, ರೈತ ಯುವ ಮುಖಂಡರಾದ ಸುರೇಂದ್ರ ಕೋರ್ಯ ಹಾಗೂ ಮಂಜುನಾಥ ಗೌಡ ಮಡ್ತಿಲ ಮೊದಲಾದವರು ಪೂರ್ವಭಾವಿ ಸಭೆಯಲ್ಲಿದ್ದರು.
Kshetra Samachara
16/09/2021 07:21 pm