ಗೋವಾದಲ್ಲಿ ನಡೆದ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ದಕ್ಷಿಣ ಕನ್ನಡ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಸಂಸ್ಥೆಯನ್ನು ಇನ್ಸ್ಟಿಟ್ಯೂಟ್ ಆಫ್ ಕರಾಟೆ ಎಂಡ್ ಮಾರ್ಷಲ್ ಆರ್ಟ್ಸ್ ವಿದ್ಯಾರ್ಥಿಗಳಾದ ಪ್ರಜ್ಞಾ ಶೆಟ್ಟಿ, ರಾಜೀಶ್ ಕೆ, ಐಮಾನ್ ಮತ್ತು ಕಾರ್ತಿಕ್ ಪ್ರತಿನಿಧಿಸಿದ್ದರು. ರಾಜೀಶ್ ಕೆ ಇವರು 2 ಚಿನ್ನದ ಪದಕ ಮತ್ತು ಪ್ರಜ್ಞಾ ಬೆಳ್ಳಿಯ ಪದಕವನ್ನು ಪಡೆದು ಮುಂದೆ ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹತೆಯನ್ನು ಪಡೆದಿದ್ದಾರೆ. ಪ್ರತಿನಿಧಿಸಿರುವ ಎಲ್ಲಾ ವಿದ್ಯಾರ್ಥಿಗಳು ಸಂಸ್ಥೆಯ ಮುಖ್ಯ ಶಿಕ್ಷಕರಾದ ನಿತಿನ್ ಎನ್ ಸುವರ್ಣ ಇವರಿಂದ ತರಬೇತಿಯನ್ನು ಪಡೆದಿದ್ದಾರೆ.
Kshetra Samachara
05/09/2021 09:42 am