ಬಂಟ್ವಾಳ; ಬಂಟ್ವಾಳ ತಾಲೂಕಿನ ಸೂಕ್ಮ ಪ್ರದೇಶಗಳಲ್ಲಿ ಬಂಟ್ವಾಳ ವೃತ್ತದ ಪೋಲೀಸ್ ಹಾಗೂ ಕ್ಷಿಪ್ರ ಕಾರ್ಯ ಪಡೆ ವತಿಯಿಂದ ಪಥ ಸಂಚಲನ ಮಂಗಳವಾರ ನಡೆಯಿತು. ಪರಂಗಿಪೇಟೆ, ಕೈಕಂಬ, ಮೆಲ್ಕಾರ್, ಕಲ್ಲಡ್ಕ ಹಾಗೂ ವಿಟ್ಲ ಪೇಟೆಗಳಲ್ಲಿ ಬಂಟ್ವಾಳ ವೃತ್ತ ದ ಬಂಟ್ವಾಳ ನಗರ ಠಾಣೆ, ಗ್ರಾಮಾಂತರ ಠಾಣೆ ಹಾಗೂ ಮೆಲ್ಕಾರ್ ಟ್ರಾಫಿಕ್ ಠಾಣಾ ಪೋಲೀಸರು ಕ್ಷಿಪ್ರ ಕಾರ್ಯಪಡೆ ಜೊತೆಗೆ ರೂಟ್ ಮಾರ್ಚ್ ನಡೆಸಿದರು. ಕ್ಷಿಪ್ರ ಕಾರ್ಯ ಪಡೆಯ ಅಸಿಸ್ಟೆಂಟ್ ಕಮಾಂಡೆಂಟ್ ಶಹಜಾನ್ ಪಿ.ಕೆ, ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಚೆಲುವರಾಜ್, ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ನಗರ ಠಾಣಾ ಎಸ್ ಐ ಅವಿನಾಶ್, ಗ್ರಾಮಾಂತರ ಎಸ್.ಐ. ಪ್ರಸನ್ನ, ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ, ಅಪರಾಧ ವಿಭಾಗದ ಎಸ್ಐ. ಸಂಜೀವ ಕೆ ಪಥಸಂಚಲನದಲ್ಲಿ ಪಾಲ್ಗೊಂಡರು.
Kshetra Samachara
04/08/2021 10:22 am