ಹಳೆಯಂಗಡಿ: ಕೊರೊನಾ ಲಾಕ್ ಡೌನ್, ಒಂಟೆ ಮಾಲಕರಿಗೂ ಸಂಕಷ್ಟ.!!

ಮುಲ್ಕಿ: ಕೊರೊನಾ ಮಹಾಮಾರಿ ಲಾಕ್ ಡೌನ್ ನಿಂದ ಅನೇಕ ವರ್ಗದವರು ತೀವ್ರ ಸಂಕಷ್ಟಕ್ಕೀಡಾಗಿದ್ದು ಅದರಲ್ಲಿ ಅನ್ಯ ರಾಜ್ಯಗಳಿಂದ ಹೊಟ್ಟೆಪಾಡಿಗಾಗಿ ಬಂದಿರುವ ಒಂಟೆ ಮಾಲಕರ ಸ್ಥಿತಿಯಂತೂ ದಯನೀಯ ಪರಿಸ್ಥಿತಿಗೆ ಬಂದಿದೆ ಎಂದು ಹೇಳಿದರೆ ತಪ್ಪಾಗಲಾರದು
ಪಣಂಬೂರು ಬೀಚ್ ಪರಿಸರದಲ್ಲಿ ಬೀಚ್ ಗೆ ಬರುವ ಪ್ರವಾಸಿಗರಿಗೆ ಒಂಟೆ ಸವಾರಿಯಿಂದ ಮನರಂಜನೆ ಒದಗಿಸುತ್ತಿದ್ದ ಒಂಟೆ ಮಾಲಕರು ಕೊರೊನಾ ಲಾಕ್ ಡೌನ್ ನಿಂದ ಕಂಗಾಲಾಗಿ ಹೋಗಿದ್ದಾರೆ.

ಗುರುವಾರ ಬೆಳಿಗ್ಗೆ ಹಳೆಯಂಗಡಿ ರಾಷ್ಟ್ರೀಯ ಒಂಟೆ ಜೊತೆ ಮಾಲಕ ಹಸಿರು ಹುಲ್ಲು ಮೇಯುತ್ತಿರುವ ದೃಶ್ಯ ಕಂಡು ಬಂದಿದ್ದು ಪಬ್ಲಿಕ್ ನೆಕ್ಸ್ಟ್ ಆತನನ್ನು ಮಾತನಾಡಿಸಿದಾಗ ಆತ ಕಣ್ಣೀರಿಡುತ್ತಾ ಭಾವುಕ ನಾಗಿದ್ದಾನೆ .""ಮಧ್ಯಪ್ರದೇಶದಿಂದ ಕರಾವಳಿ ಭಾಗದ ಪಣಂಬೂರು ಸಹಿತ ಸಮುದ್ರತೀರ ಬೀಚ್ ಗಳಲ್ಲಿ ಮಕ್ಕಳನ್ನು ಒಂಟೆಯ ಮೇಲೆ ಕೂರಿಸಿ ಹತ್ತಿಪ್ಪತ್ತು ರೂಪಾಯಿ ಪಡೆಯುವ ಮೂಲಕ ಜೀವನ ಸಾಗಿಸುತ್ತಿದ್ದೇನೆ

ಲಾಕ್ ಡೌನ್ ಅವಧಿಯಲ್ಲಿ ಸಮುದ್ರ ತೀರಕ್ಕೆ ಸಾರ್ವಜನಿಕರ ನಿಷೇಧ ಹೇರಿದ್ದರಿಂದ ಒಂಟೆ ಮಾಲಕರ ಹೊಟ್ಟಿಗೆ ಸರಿಯಾಗಿ ಆಹಾರವಿಲ್ಲ ಸಾಕಿದ ಒಂಟೆಗೆ ಎಲ್ಲಿಂದ ಆಹಾರ ಖರೀದಿಸಿ ತರಲಿ"ಎಂದು ಹೇಳಿ ಬೆಳಿಗ್ಗೆಯಿಂದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಹುಲ್ಲು ಮೇಯಿಸುತ್ತಾ ಇರುವುದು ಕಾಣುತ್ತಿತ್ತು

Kshetra Samachara

Kshetra Samachara

14 days ago

Cinque Terre

1.83 K

Cinque Terre

0