ಸುಳ್ಯ: ಕೃಷಿ ಹಾಗೂ ಭೂ ಸುಧಾರಣೆ ಮಸೂದೆಗಳ ತಿದ್ದುಪಡಿ ವಿರೋಧಿಸಿ ಕರ್ನಾಟಕಾದ್ಯಂತ ಇಂದು ರೈತ ಸಂಘಟನೆಗಳು ಕರೆ ನೀಡಿರುವ ಬಂದ್ ಬೆಂಬಲಿಸಿ ಕರವೇ ಕಾರ್ಯಕರ್ತರು ಸಾಂಕೇತಿಕವಾಗಿ ಸುಳ್ಯದಲ್ಲಿ ಪ್ರತಿಭಟನೆ ನಡೆಸಿ ತಹ
ಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಕರವೇ ಕಾರ್ಯಕರ್ತರು ಇಂದು ಸುಳ್ಯ ತಾಲೂಕು ಕನ್ನಡ ರಕ್ಷಣಾ ವೇದಿಕೆ ಗೌರವ ಅಧ್ಯಕ್ಷ ಅಶೋಕ್ ಕುಮಾರ್ ಮುಂದಾಳತ್ವದಲ್ಲಿ ಕೇರಳ-ಕರ್ನಾಟಕ ರಾಜ್ಯ ಹೆದ್ದಾರಿಯನ್ನು ಕ್ಷಣ ಕಾಲ ತಡೆದು ಪ್ರತಿಭಟನೆ ಮಾಡಿದರು.
ನಂತರ ಸುಳ್ಯ ತಾಲೂಕು ಕಚೇರಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಸುಳ್ಯ ಉಪ ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಿದರು.
ಈ ಸಂದರ್ಭ ಕರವೇ ಸದಸ್ಯರಾದ ಧನಂಜಯ ಪಲ್ಲತಡ್ಕ, ಗಣೇಶ್ ಪಲ್ಲತಡ್ಕ, ಮೋಹನ್ ಕಲ್ಲಗುಡ್ಡೆ, ಗಿರೀಶ್ ಕಲ್ಲಗುಡ್ಡೆ, ಮಂಜುನಾಥ್ ಬಡ್ದಡ್ಕ, ಸತೀಶ್ ನಾಯಕ್ , ಸುನಿಲ್ ಕಾಂತಮಂಗಲ, ಜಯರಾಜ್ ಕಾಂತಮಂಗಲ, ಅಹಮ್ಮದ್ ಮೇನಾಲ, ಶರೀಫ್ ಮೇನಾಲ, ವಿಜಯ ಕಾಂತಮಂಗಲ, ಯೋಗೀಶ್ ಕಾಂತಮಂಗಲ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
28/09/2020 06:17 pm