ಬಂಟ್ವಾಳ : ಉತ್ತರ ಪ್ರದೇಶದಲ್ಲಿ ನಿರಂತರ ನಡೆಯುತ್ತಿರುವ ಮಹಿಳೆಯರ ಮೇಲಿನ ಹಿಂಸೆ, ಲೈಂಗಿಕ ದೌರ್ಜನ್ಯ ಖಂಡಿಸಿ ಟಿಪ್ಪು ಯೂತ್ ಫೆಡರೇಶನ್ ಸಜಿಪನಡು ವತಿಯಿಂದ ಮೊಂಬತ್ತಿ ಪ್ರತಿಭಟನೆ ಸಜಿಪನಡು ಪೇಟೆಯಲ್ಲಿ ಶನಿವಾರ ರಾತ್ರಿ ನಡೆಯಿತು.
ಉತ್ತರ ಪ್ರದೇಶದಲ್ಲಿ ನಡೆದ ಹೇಯ ಕೃತ್ಯ ಮನುಷ್ಯರು ತಲೆ ತಗ್ಗಿಸುವಂತದ್ದು ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತ ಪಡಿಸಿದರು.
ಹತ್ರಾಸ್ ಪ್ರಕರಣದಲ್ಲಿ ಉ.ಪ್ರ. ಪೊಲೀಸರ ಏಕಪಕ್ಷೀಯ ಕ್ರಮ ಹಾಗೂ ಮೃತ ಮುಗ್ಧ ಯುವತಿಯ ಕುಟುಂಬಸ್ಥರು ಹಾಗೂ ಸಾಂತ್ವನ ಹೇಳಲು ಬಂದವರ ಮೇಲೆ ಯೋಗಿ ಆದಿತ್ಯನಾಥ್ ಸರಕಾರ ನಡೆದು ಕೊಂಡ ರೀತಿ ಖಂಡಿಸಲಾಯಿತು.
ಕೂಡಲೇ ಬಿಜೆಪಿ ನೇತೃತ್ವದ ಯೋಗಿ ಸರಕಾರವನ್ನು ವಜಾಗೊಳಿಸಬೇಕು ಎಂದು ಪ್ರತಿಭಟನೆಕಾರರು ರಾಷ್ಟ್ರಪತಿ ಅವರನ್ನು ಆಗ್ರಹಿಸಿದರು.
Kshetra Samachara
04/10/2020 12:50 pm