ಬಜಪೆ:ಅಕ್ಷಯ ತೃತೀಯ ಶುಭದಿನವಾದ ಇಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 57 ಜೋಡಿಗಳ ಸರಳ ವಿವಾಹವು ನಡೆಯಿತು.
ಇಂದು ಬೆಳಿಗ್ಗಿನಿಂದಲೇ ದೇವಸ್ಥಾನದಲ್ಲಿ ಸರಳ ವಿವಾಹ ಆರಂಭಗೊಂಡಿದ್ದು,ಮಧ್ಯಾಹ್ನದ ತನಕ ನಡೆಯಲಿದೆ.ದೇವಳಕ್ಕೆ ಬರುವಂತಹ ಭಕ್ತಾದಿಗಳಿಗೆ ಹಾಗೂ ವಿವಾಹಕ್ಕೆ ಬರುವಂತ ಅವರಿಗೆ ದೇವಸ್ಥಾನದ ರಥಬೀದಿ ,ಕಟೀಲು ಬಸ್ಸು ನಿಲ್ದಾಣದ ಬಳಿಯಲ್ಲಿ ತಮ್ಮ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿತ್ತು.
ಅಲ್ಲದೆ ಬಸ್ಸು ಹಾಗೂ ದಿನನಿತ್ಯ ಸಾಗುವಂತಹ ವಾಹನಗಳಿಗೆ ಸಾಗಲು ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡಲಾಗಿತ್ತು.ಇಂದು ಬೆಳಿಗ್ಗಿನಿಂದಲೇ ದೇವಳಕ್ಕೆ ಭಕ್ತರ ದಂಡೆ ಹರಿದು ಬಂದಿತ್ತು.
Kshetra Samachara
04/05/2022 12:14 pm