ಮಂಗಳೂರು: ಮಣ್ಣು ಕುಸಿತದಿಂದಾಗಿ ಕಳೆದ ೭ ದಿನಗಳಿಂದ ಸ್ಥಗಿತಗೊಂಡಿದ್ದ ಪಡೀಲ್ ಬೈಪಾಸ್ ರೈಲು ಮಾರ್ಗದಲ್ಲಿ ಗೂಡ್ಸ್ ರೈಲು ಸಂಚಾರವನ್ನು ಶನಿವಾರ ಯಶಸ್ವಿಯಾಗಿ ನಡೆಸಲಾಗಿದೆ.
ಮಳೆಯಿಂದಾಗಿ ಸೆ.೨೦ರಂದು ಪಡೀಲ್ ಬೈಪಾಸ್ ರೈಲು ಮಾರ್ಗದ ಮೇಲೆ ಕುಸಿದಿದ್ದ ಮಣ್ಣ ತೆರುವು ಕಾರ್ಯಾಚರಣೆ ಮುಂದುವರಿದಿದೆ. ದ್ವಿಪಥ ಮಾರ್ಗವಿರುವ ಈ ಸ್ಥಳದಲ್ಲಿ ಭಾರೀ ಪ್ರಮಾಣದ ಮಣ್ಣು ಕುಸಿದಿದ್ದರಿಂದ ಪ್ರಯಾಣಿಕ ರೈಲು ಹಾಗೂ ಗೂಡ್ಸ್ ರೈಲು ಮಾರ್ಗವನ್ನು ಬದಲಾಯಿಸಲಾಗಿತ್ತು.
ದಕ್ಷಿಣ ರೈಲ್ವೆ ಪಾಲ್ಫಾಟ್ ವಿಭಾಗದ ಅಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿ, ಹಿಟಾಚಿ, ಜೆಸಿಬಿ ಸಹಾಯದಿಂದ ಕಳೆದ ೨-೩ ದಿನಗಳಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯಕ್ಕೆ ಒಂದು ಬದಿಯ ಮಾರ್ಗದ ಮೇಲಿನ ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸಿ ಗೂಡ್ಸ್ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರಯಾಣಿಕರು ರೈಲು ಸಂಚಾರ ಇನ್ನೂ ಎರಡು ದಿನ ವಿಳಂಬವಾಗುವ ಸಾಧ್ಯತೆ ಇದೆ.
Kshetra Samachara
27/09/2020 04:10 pm