ಮೂಲ್ಕಿ: ಬಿಜೆಪಿ ಮೂಲ್ಕಿ ಮಹಾಶಕ್ತಿ ಕೇಂದ್ರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ "ಸ್ವಚ್ಛ ಭಾರತ್" ಪರಿಕಲ್ಪನೆಯಡಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಪ್ರಯುಕ್ತ ಮೂಲ್ಕಿ ನಪಂ ವ್ಯಾಪ್ತಿಯ ಮೂಲ್ಕಿ ಬಸ್ ನಿಲ್ದಾಣ ಕೆಎಸ್ ರಾವ್ ನಗರದ ರುದ್ರಭೂಮಿ, ಚಿತ್ರಾಪು ರುದ್ರಭೂಮಿ, ಮಾನಂಪಾಡಿ ಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು.
ಮೂಲ್ಕಿ ನಪಂ ಸದಸ್ಯ ಶೈಲೇಶ್ ಕುಮಾರ್ ಮಾತನಾಡಿ, ಪ್ರಧಾನಿ ಮೋದಿಯವರ ಸ್ವಚ್ಛತೆಯ ಕನಸಿಗೆ ಸಾಥ್ ನೀಡುವ ದೃಷ್ಟಿಯಲ್ಲಿ ಗಾಂಧಿ ಜಯಂತಿಯಂದು ಶ್ರಮದಾನ ನಡೆಸಲಾಗಿದೆ ಎಂದರು.
ಮೂಲ್ಕಿ ನಪಂ ಸದಸ್ಯರಾದ, ರಾಧಿಕಾ ಯಾದವ್ ಕೋಟ್ಯಾನ್, ದಯಾವತಿ ಅಂಚನ್, ಎಸ್ಸಿ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ವಿಠಲ್ ಎನ್. ಎಂ., ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಕೋಟ್ಯಾನ್, ಶಕ್ತಿಕೇಂದ್ರ ಪ್ರಮುಖ್ ನರಸಿಂಹ ಪೂಜಾರಿ, ಮಂಡಲ ಮಹಿಳಾ ಮೋರ್ಚಾ ಕಾರ್ಯದರ್ಶಿ ವಂದನಾ ಪಿ., ಹಿರಿಯರಾದ ವೀರಣ್ಣ ಅರಳಗುಂಡಿ, ಅರುಣ್ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
02/10/2020 10:37 pm