ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: 103 ಮಂದಿ ರೈತರಿಗೆ ಕೃಷಿ ಸಲಕರಣೆಗಳ ವಿತರಣೆ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ತಾಲೂಕು ರೈತಸಂಪರ್ಕ ಕೇಂದ್ರದಲ್ಲಿ 2020-21ನೇ ಸಾಲಿನ ವಿವಿಧ ಯೋಜನೆಗ ಅಡಿ ತಾಲೂಕಿನ 103 ಮಂದಿ ರೈತರಿಗೆ ಕೃಷಿ ಇಲಾಖೆಯ ಸಹಾಯ ಧನದಲ್ಲಿ ಒದಗಿಸಲಾಗಿರುವ ಕೃಷಿ ಸಲಕರಣೆಗಳನ್ನು ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ ವಿತರಿಸಲಾಯಿತು.

ಜಿಲ್ಲಾ ಪಂಚಾಯತ್ ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ ಮಾತನಾಡಿ, ಕೃಷಿಕರು ಎದುರಿಸುತ್ತಿರುವ ಪ್ರತಿಕೂಲ ಪರಿಸ್ಥಿತಿಯನ್ನು ಅನುಕೂಲಕರವಾಗಿಸಲು ಸೂಕ್ತ ಸವಲತ್ತುಗಳನ್ನು ಸರ್ಕಾರದ ಮೂಲಕ ಒದಗಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಬದ್ಧರಾಗಿದ್ದಾರೆ. ಸಿಬ್ಬಂದಿಯ ಕೊರತೆ ಇದ್ದರೂ ಕೃಷಿಕರಿಗೆ ಎಲ್ಲ ಸವಲತ್ತುಗಳನ್ನು ಸಕಾಲದಲ್ಲಿ ನೀಡಲು ಇಲಾಖೆ ಪರಿಶ್ರಮಿಸುತ್ತಿದೆ ಎಂದು ಹೇಳಿದರು.

ಪುತ್ತಿಗೆಯ ಮೀನಾಕ್ಷಿ, ಶಿರ್ತಾಡಿಯ ಜಾನಕಿ, ಕೆಲ್ಲಪುತ್ತಿಗೆಯ ರಾಜು ಇವರಿಗೆ ಟ್ರಾಕ್ಟರ್ (ಎಸ್‌ಸಿ ವಿಭಾಗ), ಒಬ್ಬರಿಗೆ ಹೊಸದಾಗಿ ಬಂದಿರುವ ಕಲ್ಟಿವೇಟರ್, 9 ಮಂದಿಗೆ ಸ್ಪ್ರಿಂಕ್ಲರ್, 19 ಮಂದಿಗೆ ಪವರ್ ಸ್ಪ್ರೇಯರ್, 71 ಮಂದಿಗೆ ಪವರ್ ವೀಡರ್ ವಿತರಿಸಲಾಯಿತು. ಮಂಗಳೂರು ಎ.ಪಿ.ಎಂ.ಸಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ, ಜಿಪಂ ಸದಸ್ಯೆ ಸುಜಾತಾ ಕೆಪಿ, ತಾಲೂಕು ಪಂಚಾಯತಿ ಸದಸ್ಯರಾದ ರೀಟಾ ಕುಟಿನ್ಹ, ನಾಗವೇಣಿ, ಮೂಡಾ ಅಧ್ಯಕ್ಷ ಮೇಘನಾಥ್ ಶೆಟ್ಟಿ, ಪುರಸಭಾ ಸದಸ್ಯರಾದ ರಾಜೇಶ್ ನಾಯಕ್, ಪ್ರಸಾದ್ ಕುಮಾರ್, ನಾಗರಾಜ ಪೂಜಾರಿ, ನವೀನ್ ಶೆಟ್ಟಿ, ಕೃಷಿ ಅಧಿಕಾರಿ ವಿ.ಎಸ್.ಕುಲಕರ್ಣಿ ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

03/10/2020 08:30 pm

Cinque Terre

3.35 K

Cinque Terre

0

ಸಂಬಂಧಿತ ಸುದ್ದಿ