ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹ್ಯಾಮಿಲ್ಟನ್ - ಪಂಪ್ ವೆಲ್ ಸರ್ಕಲ್‌ವರೆಗೆ ರಸ್ತೆ ಅಗಲೀಕರಣ; ಶಾಸಕ ವೇದವ್ಯಾಸ ಕಾಮತ್ ಗುದ್ದಲಿ ಪೂಜೆ

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಹ್ಯಾಮಿಲ್ಟನ್ ಸರ್ಕಲ್ ನಿಂದ ಪಂಪ್ ವೆಲ್ ಸರ್ಕಲ್ ವರೆಗೆ ರಸ್ತೆ ಅಗಲೀಕರಣ, ಮಳೆನೀರು ಚರಂಡಿ ಹಾಗೂ ಪಾದಚಾರಿ ದಾರಿ ನಿರ್ಮಾಣ ಕಾಮಗಾರಿಯ 4.5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಾಸಕ‌ ವೇದವ್ಯಾಸ್ ಕಾಮತ್ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಮಂಗಳೂರು ನಗರ, ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಎಲ್ಲ ವಿಧಗಳಲ್ಲೂ ಮಂಗಳೂರು ಅತಿ ಜನಪ್ರಿಯವಾಗಿದೆ. ಹಾಗಾಗಿ ನಗರದ ಪ್ರಮುಖ ರಸ್ತೆಗಳ ಅಗಲೀಕರಣ, ಒಳಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಈ ಸಂದರ್ಭ ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ‌ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪೂರ್ಣಿಮಾ, ಜಗದೀಶ್ ಶೆಟ್ಟಿ ಬೋಳೂರು, ಕಿರಣ್ ಕುಮಾರ್, ಶರತ್, ಪಾಲಿಕೆ ಸದಸ್ಯರಾದ ನವೀನ್ ಡಿಸೋಜ, ಕಾವ್ಯಾ ನಟರಾಜ್ ಆಳ್ವ, ಬಿಜೆಪಿ ಮುಖಂಡರಾದ ರಂಗನಾಥ್ ಕಿಣಿ, ಯೋಗೀಶ್ ಶೆಣೈ,ದಯಾನಂದ ಸನ್ಯಾಸಿಗುಡ್ಡೆ, ಜೆಸ್ಸಿಲ್, ನವೀನ್ ಶೆಣೈ,ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ರಾಮ್ ರಾಯ್ ಕಾಮತ್, ಲಕ್ಷ್ಮಣ್ ಭಟ್, ರಾಧಾಕೃಷ್ಣ ಕುದ್ಕೇರಿಗುಡ್ಡೆ, ಸಚಿನ್‌ ಸಾಲ್ಯಾನ್,ಅರ್ಚನಾ ಆಳ್ವ, ಪ್ರವೀಣ್ ಶೇಟ್, ರಾಯನ್ ಮುಂತಾದವರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

21/09/2020 07:29 pm

Cinque Terre

3.58 K

Cinque Terre

0

ಸಂಬಂಧಿತ ಸುದ್ದಿ