ಬಂಟ್ವಾಳ: ಬಿಜೆಪಿ ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ಸಭೆ ಅಧ್ಯಕ್ಷ ಕ್ಷೇತ್ರ ಸಮಿತಿ ಕಾರ್ಯದರ್ಶಿ ಸೀತಾರಾಮ ಪೂಜಾರಿ ಅಧ್ಯಕ್ಷತೆಯಲ್ಲಿ ರಾಯಿಯಲ್ಲಿ ನಡೆಯಿತು.
ಮುಂದಿನ ದಿನಗಳಲ್ಲಿ ನಡೆಯುವ ಪಕ್ಷದ ಸೇವಾ ಸಪ್ತಾಹ ಹಾಗೂ ಗ್ರಾಪಂ ಚುನಾವಣಾ ಪೂರ್ವ ಸಿದ್ದತೆ ಬಗ್ಗೆ ಸಭೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಮಟ್ಟದ ಗ್ರಾಪಂ ಚುನಾವಣಾ ಪ್ರಮುಖರಾಗಿರುವ ದೇವದಾಸ ಶೆಟ್ಟಿ ಮಾಹಿತಿ ನೀಡಿದರು.
ಸಂಗಬೆಟ್ಟು ಮಹಾಶಕ್ತಿಕೇಂದ್ರದ ಪ್ರಭಾರಿ ಪೊಳಲಿ ವೆಂಕಟೇಶ ನಾವಡ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿಗಳಾದ ಪುರುಷೋತ್ತಮ ಶೆಟ್ಟಿ, ಹರ್ಷಿಣಿ, ಕ್ಷೇತ್ರ ಕೋಶಾಧಿಕಾರಿ ಪ್ರಕಾಶ್ ಅಂಚನ್, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಸಂತ ಅಣ್ಣಳಿಕೆ, ಕಾರ್ಯದರ್ಶಿ ಸಂಜೀವ ಪೂಜಾರಿ, ಸುಲೋಚನ ಭಟ್, ಮಂದಾರತಿ ಶೆಟ್ಟಿ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
20/09/2020 06:22 pm