ಮುಲ್ಕಿ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಬಡವರಿಗೆ ಪ್ರತಿ ತಿಂಗಳು ಉಚಿತ ಅಕ್ಕಿ ಗೋಧಿ ಬೇಳೆ ಉಚಿತವಾಗಿ ಹಂಚುವ ಯೋಜನೆಯಲ್ಲಿ ಸೋರಿಕೆಯಾಗುತ್ತಿದೆ ಎಂದು ವಕೀಲರು ಮತ್ತು ಭಾರತೀಯ ಆಹಾರ ನಿಗಮ ಮಂಡಳಿಯ ಸದಸ್ಯರಾದ ಶಶಿಕುಮಾರ ಆರೋಪಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಪ್ರತಿ ತಿಂಗಳು ಉಚಿತವಾಗಿ ಅಕ್ಕಿ ಗೋಧಿ ಬೆಳೆ ಇಲಾಖೆಯಿಂದ ಹಂಚಿಕೆ ಮಾಡುತ್ತಿದ್ದು, ಈಗಾಗಲೇ ನ್ಯಾಯಬೆಲೆ ಅಂಗಡಿಗಳಲ್ಲಿ ಸಮರ್ಪಕವಾದ ತೂಕ ನೀಡದೆ ಹಾಗೂ ಹಣವನ್ನು ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿಬಂದಿದೆ. ಇಲಾಖೆಯ ಅಧಿಕಾರಿಗಳು ತಡೆಗಟ್ಟುವಲ್ಲಿ ವಿಫಲವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಂಗಡಿಗಳ ಮತ್ತು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ಭಾರತೀಯ ಆಹಾರ ನಿಗಮ ಮಂಡಳಿಯ ಸದಸ್ಯರಾದ ಶಶಿಕುಮಾರ್ ವಕೀಲರು ಎಚ್ಚರಿಕೆಯನ್ನು ನೀಡಿದ್ದಾರೆ.
Kshetra Samachara
24/11/2020 10:05 pm