ಬಂಟ್ವಾಳ: ಯಾವುದೇ ಫಲಾಪೇಕ್ಷೆ ಇಲ್ಲದೆ ತಾನು ಗಳಿಸಿದರಲ್ಲಿ ಸ್ವಲ್ಪ ಅಂಶವನ್ನು ಸಮಾಜದ ಏಳಿಗೆಗಾಗಿ ವಿನಿಯೋಗಿಸುವವರಿಗೆ ದೇವರ ಆಶೀರ್ವಾದ ಯಾವತ್ತೂ ಇರುತ್ತದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ನಾಗರಿಕ ಜಾಗೃತ ಸಮಿತಿ ನರಿಕೊಂಬು ಆಶ್ರಯದಲ್ಲಿ ನರಿಕೊಂಬು ಮತ್ತು ಶಂಭೂರು ಗ್ರಾಮಗಳ ಕುಟುಂಬಗಳಿಗೆ ಕ್ಷೇಮ ಹೆಲ್ತ್ ಕಾರ್ಡ್ ವಿತರಿಸಿ ಮಾತನಾಡಿದರು.
ನಾಗರಿಕ ಜಾಗೃತ ಸಮಿತಿ ನರಿಕೊಂಬು ಆಶ್ರಯದಲ್ಲಿ ವರ್ಷಂಪ್ರತಿ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಮತ್ತು ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಸಹಯೋಗದಲ್ಲಿ ನರಿಕೊಂಬು ಮತ್ತು ಶಂಭೂರು ಗ್ರಾಮಗಳ ಫಲಾನುಭವಿಗಳಿಗೆ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಕಾರಂತ್ ಮುತುವರ್ಜಿಯಲ್ಲಿ ಹೆಲ್ತ್ ಕಾರ್ಡ್ ವ್ಯವಸ್ಥೆ ಮಾಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ, ನಾಗರಿಕ ಜಾಗೃತ ಸಮಿತಿ ಅಧ್ಯಕ್ಷ ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಆಲ್ಫೋನ್ಸ್ ಮೆನೇಜಸ್, ಉಮೇಶ್ ಬೋಳಂತೂರು, ಮಾಧವ ಪೂಜಾರಿ ಕರ್ಬೆಟ್ಟು, ಚಂದ್ರಶೇಖರ ಪೂಜಾರಿ ಕೋರ್ಯ, ಆಲ್ಬರ್ಟ್ ಮೆನೇಜಸ್ ವೇದಿಕೆಯಲ್ಲಿದ್ದರು.
ಸಾಯಿರಾಮ್ ನಾಯಕ್ ಸ್ವಾಗತಿಸಿದರು. ನವೀನ್ ಮೆನೇಜಸ್ ವಂದಿಸಿದರು, ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ್ ಪ್ರಸ್ತಾವನೆಗೈದರು, ಉಮೇಶ್ ಬೋಳಂತೂರು ನಿರೂಪಿಸಿದರು.
Kshetra Samachara
23/11/2020 07:35 pm