ಮಂಗಳೂರು: ಮಹಾನಗರ ಪಾಲಿಕೆಗೆ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕಾರ್ಖಾನೆಗಳಿಗೆ ಸಮರ್ಪಕವಾಗಿ ಮರು ಬಳಕೆಗೆ ಪೂರೈಕೆ ಮಾಡಿರುವ ಯೋಜನೆ ಪರಿಗಣಿಸಿ (ಕೇಂದ್ರ ಸರಕಾರ ಸ್ವಾಮ್ಯದ ವಸತಿ ಮತ್ತು ನಗರಾಭಿವೃದ್ಧಿ ನಿಗಮ ) ಹುಡ್ಕೋ 2019-20ನೇ ಸಾಲಿನ ಉತ್ತಮ ಯೋಜನೆಯೆಂದು ಪ್ರಶಸ್ತಿ ನೀಡಿದೆ.
ನಗರ ಪ್ರದೇಶದ ಜೈವಿಕ ಪರಿಸರದ ಸುಧಾರಣೆಯ ಹಿನ್ನೆಲೆಯಲ್ಲಿಯೂ ಮಂಗಳೂರು ಮಹಾನಗರ ಪಾಲಿಕೆ ತೆಗೆದುಕೊಂಡ ಉತ್ತಮ ನೈರ್ಮಲ್ಯ ಯೋಜನೆಯೆಂದು ಹುಡ್ಕೋ ಸಂಸ್ಥೆ ಪರಿಗಣಿಸಿದೆ. ಮಂಗಳೂರು ಮಹಾನಗರ ಪಾಲಿಕೆಯ ತ್ಯಾಜ್ಯ ನೀರು ಮರುಬಳಕೆಯ ನಿಟ್ಟಿನಲ್ಲಿ ಸಂಘಟಿತವಾಗಿ ಅನುಷ್ಠಾನಗೊಳಿಸಿದ ಯೋಜನೆಯನ್ನು ಗಣನೆಗೆ ತೆಗೆದುಕೊಂಡು ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ.
Kshetra Samachara
20/11/2020 07:20 am