ಮುಲ್ಕಿ: ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ಪಡುಪಣಂಬೂರು ಗ್ರಾಪಂ ಯುವಜನ ಒಕ್ಕೂಟ, ದ.ಕ. ಜಿಲ್ಲಾ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾರ್ಗದರ್ಶನದಲ್ಲಿ ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಹಳೆಯಂಗಡಿ ತೋಕೂರು ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಸಂಯೋಜನೆಯಲ್ಲಿ "ತುಳುನಾಡ ತುಡರ ಪರ್ಬ -2020" ಕಾರ್ಯಕ್ರಮ ಸಂಸ್ಥೆ ಸಭಾಂಗಣದಲ್ಲಿ ಜರುಗಿತು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಪಂ ಸದಸ್ಯ ದಿವಾಕರ್ ಕರ್ಕೇರ, ಧರ್ಮವು ಮಾನವನ ಜೀವನ ಶಾಂತಿಯಿಂದ ಮುನ್ನಡೆಸಲು ಸಹಾಯಕವಾಗಿದ್ದು, ಎಲ್ಲರೂ ತನ್ನವರೆಂಬ ಭಾವನೆಯಿಂದ ಬಾಳಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಮಾತನಾಡಿ, ಧರ್ಮವು ಒಂದು ರಕ್ಷಾ ಕವಚವಿದ್ದಂತೆ, ನಮ್ಮಲ್ಲಿರುವ ಉತ್ತಮ ಸಂಸ್ಕಾರದಿಂದ ಧರ್ಮ ಬೆಳಗಲು ಸಾಧ್ಯ. ಎಂದರು. ಸಂಸ್ಥೆಯ ಮಹಿಳಾ ಸದಸ್ಯರಿಗೆ ನಡೆದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಶೈಲಾ ಶೆಟ್ಟಿಗಾರ್ ತಂಡ (ಪ್ರ), ಸುಜಾತ ಜಿ.ಕೆ.( ದ್ವಿ) ಹಾಗೂ ವಾಣಿ ಮಹೇಶ್ (ಸಮಾಧಾನಕರ) ಅವರಿಗೆ ಸುರತ್ಕಲ್ ಎನ್ಐಟಿಕೆ ಸಿಬ್ಬಂದಿ ರಾಜೇಶ್ ದೇವಾಡಿಗ ಬಹುಮಾನ ವಿತರಿಸಿದರು. ಪಡುಪಣಂಬೂರು ಗ್ರಾಪಂ ಮಾಜಿ ಸದಸ್ಯರಾದ ಸಂತೋಷ್ ಕುಮಾರ್, ಲೀಲಾ ಬಂಜನ್ ಸಂಸ್ಥೆಯ ಗೌರವ ಅಧ್ಯಕ್ಷ ನಾರಾಯಣ ಜಿ.ಕೆ., ಅಧ್ಯಕ್ಷ ಸಂತೋಷ್ ದೇವಾಡಿಗ, ಮಹಿಳಾ ಸಮಿತಿ ಕಾರ್ಯಾಧ್ಯಕ್ಷೆ ವಾಣಿ ಮಹೇಶ್ ಉಪಸ್ಥಿತರಿದ್ದರು. ಗೋಪೂಜೆ ನಡೆಸಿ, ದೀಪಾವಳಿ ಆಚರಿಸಲಾಯಿತು.
Kshetra Samachara
18/11/2020 08:15 am