ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಳೆಪುಣಿ: ಸೋಲಾರ್ ಹೋಮ್ ಲೈಟಿಂಗ್ ಸಿಸ್ಟಮ್ ಅಳವಡಿಕೆ

ಮುಡಿಪು: ಬಾಳೆಪುಣಿ ಗ್ರಾಪಂ ವ್ಯಾಪ್ತಿಯ ಕುಕ್ಕುದಕಟ್ಟೆ ವಿಶೇಷ ಚೇತನ ಹಿರಿಯ ನಾಗರಿಕ ಜೋಸೆಫ್ ತೆಲೀಸ್ ಅವರ ಮನೆಗೆ ಸೋಲಾರ್ ಗ್ರಾಮ ಅಭಿಯಾನದಡಿ ದಾನಿಗಳ ನೆರನಿಂದ 12 ಸಾವಿರ ರೂ. ವೆಚ್ಚದಲ್ಲಿ ಸೋಲಾರ್ ಹೋಮ್ ಲೈಟಿಂಗ್ ಸಿಸ್ಟಮ್ ಅಳವಡಿಸಲಾಯಿತು.

ವಿಶೇಷ ಚೇತನ ಹಿರಿಯ ನಾಗರಿಕ ಜೋಸೆಫ್ ತೆಲೀಸ್‌ ಅವರ ಮನೆಗೆ ಜನ ಶಿಕ್ಷಣ ಟ್ರಸ್ಟ್, ಸೆಲ್ಕೋ ಫೌಂಡೇಶನ್, ಪ್ರಗತಿಪರ ಕೃಷಿಕ ರೋಶನ್ ಡಿಸೋಜ ನಟ್ಟಿತ್ತಿಲು ಕನ್‌ಸ್ಟ್ರಕ್ಷನ್ ಮಾಲಕ ಅರುಣ್ ಡಿಸೋಜ ಅವರ ನೆರವಿನಿಂದ ಅಳವಡಿಸಿದ ಸೋಲಾರ್ ಹೋಮ್ ಸಿಸ್ಟ್‌ಮ್‌ಗೆ ಮುಡಿಪು ಚರ್ಚ್‌ನ ಧರ್ಮಗುರು ಫಾ. ಸಿರಿಲ್ ಲೋಬೊ ಚಾಲನೆ ನೀಡಿದರು.

ಮಾಜಿ ಒಂಬುಡ್ಸ್‌ಮನ್ ಶೀನ ಶೆಟ್ಟಿ, ತಾಪಂ ಸದಸ್ಯ ಹೈದರ್ ಕೈರಂಗಳ, ಪಿಡಿಒ ಸುನಿಲ್ ಕುಮಾರ್, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಸೆಲ್ಕೋದ ರವೀನಾ, ಮಾದರಿ ಗ್ರಾಮ ಅಭಿಯಾನದ ಸ್ವಯಂ ಸೇವಕರಾದ ಸದಾನಂದ, ಇಸ್ಮಾಯಿಲ್, ಚೇತನ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

Edited By : Vijay Kumar
Kshetra Samachara

Kshetra Samachara

06/11/2020 10:08 pm

Cinque Terre

4.51 K

Cinque Terre

0

ಸಂಬಂಧಿತ ಸುದ್ದಿ