ಮುಲ್ಕಿ: ಕದಿಕೆ ಟ್ರಸ್ಟ್ ವತಿಯಿಂದ ನಬಾರ್ಡ್ ಪ್ರಾಯೋಜಿತ ನಾಲ್ಕು ತಿಂಗಳ ನೇಕಾರಿಕೆ ತರಬೇತಿ ಕಿನ್ನಿಗೋಳಿಯ ತಾಳಿಪಾಡಿ ನೇಕಾರ ಸಂಘದಲ್ಲಿ ಸಂಪನ್ನಗೊಂಡಿತು.
ಈ ಕೌಶಲ್ಯ ಕಲಿಕಾ ಕಾರ್ಯಕ್ರಮದಲ್ಲಿ ಹತ್ತು ಮಂದಿ ಯುವ ನೇಕಾರರು ಉಡುಪಿ ಸೀರೆ ನೇಕಾರಿಕೆಯಲ್ಲಿ ತರಬೇತಿಗೊಂಡಿದ್ದಾರೆ.
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಉಡುಪಿ ಸೀರೆ ನೇಕಾರಿಕೆಗೆ ನವ ನೇಕಾರರು ಸೇರ್ಪಡೆಯಾಗದೆ ದಶಕಗಳೇ ಆಗಿದ್ದ ಈ ಸಂದರ್ಭದಲ್ಲಿ ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ.
ಕದಿಕೆ ಟ್ರಸ್ಟ್ ನ ಉಡುಪಿ ಸೀರೆ ಉಳಿಸಿ ಅಭಿಯಾನದ ಅಂಗವಾಗಿ ಈ ತರಬೇತಿ ನಡೆದಿತ್ತು. ಹತ್ತು ಜನರಿಗೆ ಎರಡು ತಂಡದಲ್ಲಿ ತಲಾ ಎರಡು ತಿಂಗಳ ತರಬೇತಿ ಸ್ಟೈಪೆಂಡ್ ನೊಂದಿಗೆ ನೀಡಲಾಗಿತ್ತು.
ಇದರಿಂದ ಉಡುಪಿ ಸೀರೆ ನೇಕಾರರ ಸಂಖ್ಯೆ ಉಭಯ ಜಿಲ್ಲೆಗಳಲ್ಲಿ ಸೇರಿ ಒಟ್ಟು ಅರುವತ್ತು ಆದ ಹಾಗಾಗಿದೆ.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ನಬಾರ್ಡ್ ಕರ್ನಾಟಕ ಡಿಜಿಎಮ್ ಅರುಣ್ ಕುಮಾರ್ ಮತ್ತು ಡಿಡಿಎಮ್ ಮಂಗಳೂರು ಸಂಗೀತಾ ಕಟ್ಟರ್ ಅವರು ಕದಿಕೆ ಟ್ರಸ್ಟ್ ನ ಕೆಲಸ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದೆಯೂ ತಮ್ಮ ಸಂಸ್ಥೆಯಿಂದ ಬೆಂಬಲ ನೀಡುವ ಬಗ್ಗೆ ಭರವಸೆ ನೀಡಿದರು.
ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಟ್ರಸ್ಟ್ ನ ಚಟುವಟಿಕೆ ಬಗ್ಗೆ ವಿವರಣೆ ನೀಡಿದರು.
ಹೊಸದಾಗಿ ಸೇರ್ಪಡೆಗೊಂಡ ನೇಕಾರ ಸದಸ್ಯರನ್ನು ಹಿರಿಯ ನೇಕಾರರು ಶಾಲು ಕೊಟ್ಟು ಗೌರವಿಸಿ ಸಂಘಕ್ಕೆ ಬರಮಾಡಿಕೊಂಡರು.
ಹಿರಿಯ ತರಬೇತಿದಾರ ಮತ್ತು ತಾಳಿಪಾಡಿ ನೇಕಾರ ಸಂಘದ ಅಧ್ಯಕ್ಷ ಆನಂದ ಶೆಟ್ಟಿಗಾರ್, ತರಬೇತಿದಾರರಾದ ಮೋಹಿನಿ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಕದಿಕೆ ಟ್ರಸ್ಟ್ ಕಾರ್ಯದರ್ಶಿ ಚಿಕ್ಕಪ್ಪ ಶೆಟ್ಟಿ ಕಾರ್ಯ ಕ್ರಮ ನಿರ್ವಹಿಸಿದರು. ತಾಳಿಪಾಡಿ ನೇಕಾರ ಸಂಘದ ನಿರ್ವಾಹಕ ನಿರ್ದೇಶಕ ಮಾಧವ ಶೆಟ್ಟಿಗಾರ್ ವಂದಿಸಿದರು.
Kshetra Samachara
05/11/2020 12:48 pm