ಪಡುಬಿದ್ರಿ: ಬ್ಲೂಫ್ಲ್ಯಾಗ್ ಬೀಚ್ ಆಗಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಪಡು ಬಿದ್ರಿ ಎಂಡ್ ಪಾಯಿಂಟ್ ಬೀಚ್‌ಗೆ ಭಾನುವಾರ ಒಂದೇ ದಿನ 2,750 ಜನ ಭೇಟಿ ನೀಡಿದ್ದು, ಕಳೆದ ಭಾನುವಾರ 2,500 ಮಂದಿ ಭೇಟಿ ನೀಡಿದ್ದರು.
ಬೀಚ್‌ಗೆ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಪಡುಬಿದ್ರಿ ಹೆದ್ದಾರಿಯಿಂದ ಬೀಚ್ ಸಂಪರ್ಕಿಸುವ ರಸ್ತೆ ಅಗಲ ಕಿರಿದಾಗಿರುವ ಕಾರಣ ಕಿಲೋ ಮೀಟರ್ ಗಟ್ಟಲೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ ಜನರು ತೊಂದರೆ ಪಟ್ಟರು. ಅಂತಾರಾಷ್ಟ್ರೀಯ ಮಾನ್ಯತೆ ದೊರೆತ ಬಳಿಕ ಬೀಚ್‌ನಲ್ಲಿ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದ್ದು, ಕೊರೊನಾ ಭೀತಿ ಮರೆತು ದೂರದೂರುಗಳಿಂದ ಪ್ರವಾಸಿಗರು ರಜಾ ದಿನ ಕಳೆಯಲು ಇಲ್ಲಿಗಾಗಮಿಸುತ್ತಿದ್ದು, ಸಂಚಾರ ದಟ್ಟಣೆ ನಿಯಂತ್ರಿಸಲು ಬೆರಳೆಣಿಕೆಯಲ್ಲಿದ್ದ ಪೊಲೀಸರು ಹಾಗೂ ಬೀಚ್ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ರಾಷ್ಟ್ರಿಯ ಹೆದ್ದಾರಿ 66ರಿಂದ ಬೀಚ್ ಸಂಪರ್ಕಿಸುವ ರಸ್ತೆ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಸುಗಮ ಸಂಚಾರ ದೃಷ್ಟಿಯಿಂದ ಬೀಚ್ ಸಂಪರ್ಕಿಸುವ ಪ್ರಮುಖ ರಸ್ತೆ ಶೀಘ್ರ ವಿಸ್ತರಣೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟುಸಮಸ್ಯೆಯಾಗಲಿದೆ.
Kshetra Samachara
01/11/2020 10:49 pm