ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಮೂಡುಬಿದಿರೆ ಗಾಂಧಿನಗರದ ನಿವಾಸಿ ದೈವ ನರ್ತಕ ಗಂಗಯ್ಯ ಪರವ ಹಾಗೂ ಪಾಲಡ್ಕ ಗ್ರಾಮದ ಕರಾಟೆಪಟು ಭಾಸ್ಕರ್ ಆಯ್ಕೆಯಾಗಿದ್ದಾರೆ.
ಗಂಗಯ್ಯ ಪರವ ಅವರು ಕಳೆದ 60 ವರ್ಷಗಳಿಂದ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ತಮ್ಮ ಸೇವೆಗಾಗಿ ಕರ್ನಾಟಕ ಜಾನಪದ ಪರಿಷತ್ತಿನ ಜಾನಪದ ಲೋಕ ಪ್ರಶಸ್ತಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಆಳ್ವಾಸ್ ವಿಶ್ವನುಡಿಸಿರಿ ಗೌರವ ಸಹಿತ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪಾಲಡ್ಕದ ಯುವ ಕರಾಟೆಪಟು ಭಾಸ್ಕರ್ ಅವರು ಕರಾಟೆಯಲ್ಲಿ ಅಂತರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.
Kshetra Samachara
01/11/2020 07:35 pm