ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 8 ಕೋಟಿ ರೂ. ವೆಚ್ಚದಲ್ಲಿ ಆಕರ್ಷಕ 12 ಕಿ.ಮೀ. ಸೈಕಲ್‌ ಪಥ ನಿರ್ಮಾಣ- ಟ್ರ್ಯಾಕ್ ಹೇಗಿದೆ ಗೊತ್ತಾ?

ಮಂಗಳೂರು: ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ 8 ಕೋಟಿ ರೂ. ವೆಚ್ಚದಲ್ಲಿ ಮಂಗಳೂರಿನಲ್ಲಿ ಆಕರ್ಷಕ 12 ಕಿ.ಮೀ. ಸೈಕಲ್‌ ಪಥ ನಿರ್ಮಾಣವಾಗಲಿದೆ. ಇದು ನಗರದ ಪ್ರಮುಖ ಓಣಿಗಳು ಮತ್ತು ರಸ್ತೆ ಬದಿಯಲ್ಲಿ ಈ ಟ್ರ್ಯಾಕ್‌ ಹಾದು ಹೋಗಲಿದೆ.

'ಸೈಕಲ್ ಪಥ' ಯೋಜನೆಯ ಕುರಿತು ವಿಸ್ತೃತ ವರದಿ ತಯಾರಿ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು, ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ವಿಶೇಷವೆಂದರೆ ಕೆಂಪು ಮತ್ತು ಹಳದಿ ಎಂಬ ಎರಡು ಪ್ರತ್ಯೇಕ ಪಥ ನಿರ್ಮಾಣವಾಗಲಿದ್ದು, ಕೆಂಪು ಪಥ ಸುಮಾರು 8 ಕಿ.ಮೀ. ಇರಲಿದೆ. ಇದು ನಗರದ ಓಣಿ ರಸ್ತೆಗಳಲ್ಲಿ ಸಾಗಿದರೆ, ಹಳದಿ ಪಥವು ಸುಮಾರು 4 ಕಿ.ಮೀ. ಇರಲಿದೆ. ಇದು ರಸ್ತೆಯ ಬದಿಯಲ್ಲಿ ಸಾಗಲಿದೆ.

ಟ್ರ್ಯಾಕ್ ಹೀಗಿದೆ:

ಕೆಂಪು ಪಥವು ಬೋಳಾರ ಬೋಟ್‌ ರಿಪೇರ್‌ ಯಾರ್ಡ್‌ ನಿಂದ ಆರಂಭವಾಗಿ ಕಾಸಿಯ ಸ್ಕೂಲ್‌-ಮಣಿಪಾಲ್‌ ಸ್ಕೂಲ್‌-ರೈಲು ನಿಲ್ದಾಣ- ಪುರಭವನ-ಸೆಂಟ್ರಲ್‌ ಮಾರುಕಟ್ಟೆ- ರಥಬೀದಿ ಹೂವಿನ ಮಾರುಕಟ್ಟೆ-ಬಿಇಎಂ ಶಾಲೆ-ಕೆನರಾ ಶಾಲೆ-ಶಾರದಾ ವಿದ್ಯಾ ಲಯ-ಕೆನರಾ ಕಾಲೇಜು-ಎಸ್‌ಡಿಎಂ ಕಾಲೇಜು-ಟಿಎಂಎ ಪೈ ಕನ್ವೆನ್ಷನ್‌ ಸೆಂಟರ್‌-ಶ್ರೀದೇವಿ ಕಾಲೇಜು ಬಳಿ ಮುಕ್ತಾಯ ಗೊಳ್ಳಲಿದೆ.

ಹಳದಿ ಪಥವು ಮಾರ್ನಮಿ ಕಟ್ಟೆ ರೈಲ್ವೇ ಓವರ್‌ ಬ್ರಿಡ್ಜ್‌ನಿದ ಆರಂಭವಾಗಿ ಸೈಂಟ್‌ ಜೋಸೆಫ್‌ ಕಾಲೇಜು, ರೋಶನಿ ನಿಲಯ, ಹೈಲ್ಯಾಂಡ್‌ ಕಾಫಿ ವರ್ಕ್‌, ತೆರಿಗೆ ಕಚೇರಿ ಬಳಿ ಪೂರ್ಣಗೊಳ್ಳಲಿದೆ.

Edited By : Vijay Kumar
Kshetra Samachara

Kshetra Samachara

20/10/2020 05:27 pm

Cinque Terre

6.46 K

Cinque Terre

1

ಸಂಬಂಧಿತ ಸುದ್ದಿ