ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಸೇ ನೋ ಟು ಡ್ರಗ್ಸ್‌'- ಜಾಗೃತಿ ಮೂಡಿಸುತ್ತಿದೆ ಮಂಗಳೂರಿನ ಸಿಟಿ ಬಸ್‌

ಮಂಗಳೂರು: ಸೇ ನೋ ಟು ಡ್ರಗ್ಸ್‌ ಎಂದು ಹೇಳುವ ಮೂಲಕ ಮಂಗಳೂರಿನ ಸಿಟಿ ಬಸ್‌ವೊಂದು ಜಾಗೃತಿ ಮೂಡಿಸುತ್ತಿದೆ.

ಹೌದು. ಮಂಗಳೂರು ನಗರದ ಸ್ಟೇಟ್ ಬ್ಯಾಂಕ್‌ನಿಂದ ಮಂಗಳಾದೇವಿಗೆ ಸಂಚರಿಸುವ 27 ನಂಬರ್‌ನ ಗಣೇಶ್ ಪ್ರಸಾದ್ ಸಿಟಿ ಬಸ್ ಜನ ಜಾಗೃತಿ ಮೂಡಿಸುತ್ತಿದೆ. ಈ ಮೂಲಕ ಸಾರ್ವಜನಿಕರ ಗಮನ ಸೆಳೆದಿದೆ.

'ಯುವರ್ ಲೈಫ್ ಇಸ್ ಇನ್ ಯುವರ್ ಹ್ಯಾಂಡ್', 'ಡ್ರಗ್ಸ್ ವಿಲ್ ಬಿ ಯುವರ್ ಡೂಮ್' ಹಾಗೂ 'ಸೇ ನೋ ಟು ಡ್ರಗ್ಸ್' ಎಂಬ ಜಾಗೃತಿ ಬರಹಗಳನ್ನು ಬಸ್‌ ಮೇಲೆ ಬರೆಯಲಾಗಿದೆ. ಈ ಮೂಲಕ ಡ್ರಗ್ಸ್‌ ಹಿಂದೆ ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿರುವ ಯುವಕರಿಗೆ ಬುದ್ಧಿ ಹೇಳು ಕೆಲಸವನ್ನು ಬಸ್‌ ಮಾಡುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಟಿ‌ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ಅವರು, 'ಪ್ರಜ್ಞಾವಂತರ ನಗರಿ ಮಂಗಳೂರಿನಲ್ಲೂ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಅನಿವಾರ್ಯವೆನಿಸಿದೆ. ನಮ್ಮ ಸಿಟಿ ಬಸ್ ಕೇವಲ ಜನರ ಪ್ರಯಾಣಕ್ಕೆ ಮಾತ್ರವಲ್ಲ, ಜನಜಾಗೃತಿ ಮೂಡಿಸುವ ಒಂದು ಮಾಧ್ಯಮ ಕೂಡ ಹೌದು. ಈ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

20/10/2020 05:12 pm

Cinque Terre

14.09 K

Cinque Terre

2

ಸಂಬಂಧಿತ ಸುದ್ದಿ