ಮುಲ್ಕಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿರುವೆರ್ ಕುಡ್ಲ ಮುಲ್ಕಿ ಘಟಕದ 32ನೇ ಸೇವಾ ಯೋಜನೆಯಂತೆ ಚಿತ್ರಾಪು ಗ್ರಾಮದ ಅನಾರೋಗ್ಯದಿಂದ ಬಳಲುತ್ತಿರುವ ಸುಧಾಕರ್ ದೇವಾಡಿಗ ಅವರಿಗೆ ನೆರವು ನೀಡಲಾಯಿತು.
ಸುಧಾಕರ್ ದೇವಾಡಿಗ ವೃತ್ತಿ ಯಲ್ಲಿ ಟೈಲರ್ ಆಗಿದ್ದು ಕುಟುಂಬದ ಆಧಾರಸ್ತಂಭ ಆಗಿದ್ದರು. ಆರ್ಥಿಕವಾಗಿ ಸಂಕಷ್ಟ ದಲ್ಲಿರುವ ಕುಟುಂಬಕ್ಕೆ ಘಟಕದ ಸ್ಪಂದನ ನಿಧಿಯನ್ನು ಯುವ ಉದ್ಯಮಿ ಲೋಕೇಶ್ ಕೋಟ್ಯಾನ್ ಚಿತ್ರಾಪು ಹಸ್ತಾಂತರಿಸಿದರು.
ಘಟಕಾಧ್ಯಕ್ಷ ಕಿಶೋರ್ ಸಾಲ್ಯಾನ್ ಬಪ್ಪನಾಡು, ಉಪಾಧ್ಯಕ್ಷ ಯಾದವ್ ಕೋಟ್ಯಾನ್, ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ಕೋಶಾಧಿಕಾರಿ ಅಶೋಕ್ ಸುವರ್ಣ, ಜೊತೆ ಕಾರ್ಯದರ್ಶಿ ರಕ್ಷಿತ್ ಕೊಳಚಿಕಂಬಳ , ರಿತೇಶ್ ಅಂಚನ್, ಸಲಹೆಗಾರ ಉಮೇಶ್ ಮಾನಂಪಾಡಿ, ಸಂಘಟನೆ ಕಾರ್ಯದರ್ಶಿ ರಮಾನಾಥ್ ಸುವರ್ಣ, ಕಿರಣ್ ಕುಮಾರ್ ಬರ್ಕೆ, ಗ್ರಾಮ ಸಂಚಾಲಕರಾದ ಕಿಶೋರ್ ಅಂಚನ್, ತಾರಾನಾಥ್, ಕೀರ್ತನ್ ಕೆರೆಕಾಡು, ಮಾಧವ ಕಿಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/10/2020 05:37 pm