ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಯಿಯ ಅಂತ್ಯ ಕ್ರಿಯೆಗೆ ಜಾಗ ನೀಡಲು ತಂದೆಯ ಮನೆ ಮುಂದೆಯೇ ಧರಣಿ ಕುಳಿತ ಪುತ್ರ!

ಶಿವಮೊಗ್ಗ: ತಾಯಿಯ ಮೃತದೇಹದ ಅಂತ್ಯ ಸಂಸ್ಕಾರ ನೆರವೇರಿಸಲು ಜಮೀನಿನಲ್ಲಿ ಜಾಗ ನೀಡುವಂತೆ ಆಗ್ರಹಿಸಿ ಮಗ ತನ್ನ ತಂದೆ ಮನೆಯ ಮುಂದೆಯೇ ರಾತ್ರಿಯಿಡೀ ತಾಯಿಯ ಮೃತದೇಹದೊಂದಿಗೆ ಧರಣಿ ನಡೆಸಿದ ಘಟನೆ ಹೊಸನಗರ ತಾಲೂಕಿನ ಯಡಗುಡ್ಡೆ ಗ್ರಾಮದಲ್ಲಿ ಶನಿವಾರ ನಡೆದಿದೆ.

ಯಡೆಗುಡ್ಡೆ ಗ್ರಾಮದ ನಾಗರಾಜ್ ಎಂಬವರ ಮೊದಲ ಪತ್ನಿ ನಾಗರತ್ನ(50) ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದರು. ಅವರ ಅಂತ್ಯ ಸಂಸ್ಕಾರಕ್ಕೆ ತಮ್ಮ ಜಮೀನಿನಲ್ಲೇ ಜಾಗ ನೀಡುವಂತೆ ಪುತ್ರ ಗಣೇಶ್ ತಂದೆಯೊಂದಿಗೆ ವಿನಂತಿಸಿದ್ದಾರೆ.

ಆದರೆ, ಇದಕ್ಕೆ ನಾಗರಾಜ್ ಸಮ್ಮತಿಸಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಗಣೇಶ್ ತಂದೆಯ ಮನೆಯ ಎದುರು ತಾಯಿಯ ಮೃತದೇಹವನ್ನಿಟ್ಟು ರಾತ್ರಿಯಿಡೀ ಧರಣಿ ನಡೆಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ರಿಪ್ಪನ್ ಪೇಟೆ ಪೊಲೀಸರು ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.

ನಾಗರತ್ನ ಕಳೆದ 10 ವರ್ಷಗಳ ಹಿಂದೆ ಪತಿ ನಾಗರಾಜ್ ಹಾಗೂ ಮಗ ಗಣೇಶನನ್ನು ತೊರೆದು ಹೋಗಿದ್ದರೆನ್ನಲಾಗಿದೆ. ಬಳಿಕ ನಾಗರಾಜ್ ಎರಡನೇ ವಿವಾಹವಾಗಿದ್ದರು.

Edited By : Nirmala Aralikatti
Kshetra Samachara

Kshetra Samachara

17/10/2020 10:42 pm

Cinque Terre

9.65 K

Cinque Terre

0

ಸಂಬಂಧಿತ ಸುದ್ದಿ