ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೀರ್ಥಹಳ್ಳಿ: ರಂಜದಕಟ್ಟೆ ತಾತ್ಕಾಲಿಕ ಸೇತುವೆ ಕುಸಿತ; ದ್ವಿಚಕ್ರ ವಾಹನ ಮಾತ್ರ ಸಂಚಾರ

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಶಿವಮೊಗ್ಗ-ಉಡುಪಿ ಮುಖ್ಯ ಹೆದ್ದಾರಿಯ ರಂಜದಕಟ್ಟೆ ನೂತನವಾಗಿ ನಿರ್ಮಾಣಗೊಂಡಿದ್ದ ತಾತ್ಕಾಲಿಕ ಸೇತುವೆ ಮಳೆ ರಭಸಕ್ಕೆ ಕುಸಿದಿದೆ.

ತೀರ್ಥಹಳ್ಳಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹೊಳೆ ನೀರು ಹೆಚ್ಚಳವಾಗಿದ್ದು, ನೀರಿನ ರಭಸಕ್ಕೆ ತಾತ್ಕಾಲಿಕ ಸೇತುವೆಯ ಪೈಪ್ ಮತ್ತು ಮಣ್ಣು ಕೊಚ್ಚಿ ಹೋಗಿದೆ. ಸದ್ಯದ ಪರಿಸ್ಥಿತಿಯಲ್ಲಿ ವಾಹನ ಸಂಚಾರಕ್ಕೆ ಯೋಗ್ಯವಲ್ಲದೆ ಇರುವುದರಿಂದ ದ್ವಿಚಕ್ರ ವಾಹನ ಹೊರತುಪಡಿಸಿ ಬೇರೆಲ್ಲ ವಾಹನಗಳಿಗೆ ನಿರ್ಬಂಧಿಸಲಾಗಿದೆ.

ಬಸ್, ಆ್ಯಂಬುಲೆನ್ಸ್ ಹಾಗೂ ಘನ ವಾಹನಗಳ ಸಂಚಾರವನ್ನು ಬೊಬ್ಬಿ, ಬಿಳಾಲುಕೊಪ್ಪ ಮೂಲಕ ಬದಲಿ ರಸ್ತೆಯನ್ನಾಗಿ ಅನುವು ಮಾಡಿಕೊಡಲಾಗಿದೆ. ಶೀಘ್ರ ಮತ್ತೆ ಸೇತುವೆ ಕಾಮಗಾರಿ ಪ್ರಾರಂಭಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

15/10/2020 08:44 pm

Cinque Terre

2.87 K

Cinque Terre

0

ಸಂಬಂಧಿತ ಸುದ್ದಿ